Slide
Slide
Slide
previous arrow
next arrow

ನ.7ಕ್ಕೆ ಅರಣ್ಯವಾಸಿಗಳ ಉಳಿಸಿ ಜಾಥಾ: ಸಂಘಟಿತ, ಕಾನೂನಾತ್ಮಕ ಹೋರಾಟಕ್ಕೆ ನಿರ್ಧಾರ

300x250 AD

ಶಿರಸಿ: ನಿರಂತರ ೩೩ ವರ್ಷದಿಂದ ಅರಣ್ಯವಾಸಿಗಳ ಪರವಾಗಿ ಜರುಗಿಸಿದ ಹೋರಾಟವನ್ನು ಮುಂದಿನ ದಿನಗಳಲ್ಲಿ ರಾಜ್ಯಾದಂತ ಸಂಘಟಿತ ಮತ್ತು ಕಾನೂನಾತ್ಮಕ ಹೋರಾಟವನ್ನು ಮುಂದುವರೆಸುವುದು ಹಾಗೂ ರಾಜ್ಯಾದಂತ ಹತ್ತು ಸಾವಿರ ಕಿ.ಮೀ ಸಂಚರಿಸಿ, ನ.7 ಕ್ಕೆ ಬೆಂಗಳೂರಿನಲ್ಲಿ ಅರಣ್ಯವಾಸಿಗಳ ಉಳಿಸಿ ಜಾಥಾ ಹಮ್ಮಿಕೊಳ್ಳಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಣಯಿಸಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಯ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರಸಿ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಸೆ.12ರಂದು ಅರಣ್ಯ ಭೂಮಿ ಹೋರಾಟ-33 ವರ್ಷದ ಅಂಗವಾಗಿ, ಏರ್ಪಡಿಸಲಾದ “ಅರಣ್ಯವಾಸಿಗಳ ಚಿಂತನೆ” ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಲಾಗಿದೆ.

    ಕಾನೂನು ಬಾಹೀರವಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ವಿಚಾರಣೆ ಜರುಗಿಸುವದು, ಕಾನೂನು ಭಾಹೀರವಾಗಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಡೆಸುವ ಕ್ರಮವನ್ನು ಸಭೆಯಲ್ಲಿ ಖಂಡಿಸುವ ನಿರ್ಣಯಿಸಲಾಯಿತು. ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಅರಣ್ಯ ಕಾಯಿದೆ ಕಲಂ 64ಎ ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ವಿಚಾರಣಾ ನೋಟಿಸ್ ನೀಡದಿರುವುದು ಮುಂತಾದ 6 ನಿರ್ಣಯಗಳನ್ನು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.

300x250 AD

ಅರಣ್ಯ ಸಚಿವರಿಗೆ ಆಹ್ವಾನ:

   ಜಿಲ್ಲೆಯಲ್ಲಿ ಅರಣ್ಯವಾಸಿಗಳ ವಾಸ್ತವ್ಯ, ಬದುಕು ಮತ್ತು ಜನ ಜೀವನದ ಅಧ್ಯಯನದ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಹ್ವಾನ ನೀಡಲು ಸಭೆ ನಿರ್ಧರಿಸಿತು. ಅಲ್ಲದೇ, ಜಿಲ್ಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್‌ನ್ನು ಅರಣ್ಯ ಸಚಿವರು ನಡೆಸಲು  ಸಭೆ ನಿರ್ಣಯಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

Share This
300x250 AD
300x250 AD
300x250 AD
Back to top