ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿ ಜೆ ಪಿ ಚುನಾವಣಾ ನಿರ್ವಹಣಾ ಸಭೆ ಗುರುವಾರ ದೀನದಯಾಳ್ ಭವನದಲ್ಲಿ ನಡೆಯಿತು. 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಮೋದಿಜಿಯವರ ಬಗ್ಗೆ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಒಳ್ಳೆಯ ಉತ್ಸಾಹ ಇರುವುದನ್ನು ಚರ್ಚಿಸಲಾಯಿತು.
ಪ್ರತಿ ಮತದಾರನು ಮೋಡಿಜಿಯವರು ಕೊಟ್ಟ ಕಾರ್ಯಕ್ರಮಗಳ ಫಲಾನುಭವಿಯೇ ಆಗಿದ್ದು ಅದನ್ನು ಮತದಾರರಿಗೆ ಮನವರಿಕೆ ಮಾಡುವ ಬಗ್ಗೆ ಹಾಗೂ ಪ್ರತಿ ಬೂತ್ ನಲ್ಲಿ ಪ್ರತಿ ಮನೆ ಮನೆಗೆ ತಲುಪಲು ಕಾರ್ಯಕರ್ತರು ಅವಿರತವಾಗಿ ಶ್ರಮಿಸುವಂತೆ ಮಾಡಲು ತಿಳಿಸಲಾಯಿತು ಮತ್ತು ಅತಿಹೆಚ್ಚಿನ ಮತ ಪಡೆಯಲು ಚರ್ಚಿಸಲಾಯಿತು.
ವಿವಿಧ ಚುನಾವಣಾ ಸಮಿತಿಯ ಇದುವರೆಗಿನ ಕಾರ್ಯನಿರ್ವಹನೆಯ ಅವಲೋಕನ ನಡೆಯಿತು, ಮುಂದೆ ಕೈಗೊಳ್ಳಬೇಕಾದ ಕಾರ್ಯಕ್ರಮದ ಬಗ್ಗೆ ಸಲಹೆ ನೀಡಲಾಯಿತು
ಈ ಸಭೆಯಲ್ಲಿ ಲೋಕಸಭಾ ಚುನಾವಣಾ ಉಸ್ತುವಾರಿ ಹರತಾಳು ಹಾಲಪ್ಪ, ಸಂಚಾಲಕ ಗೋವಿಂದ ನಾಯ್ಕ್, ಶಿವಮೊಗ್ಗ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಸಹಪ್ರಭಾರಿ ಪ್ರಸನ್ನ ಕೆರೆಕೈ, ಕುಮಟಾ ವಿಧಾನಸಭಾ ಸಂಚಾಲಕ ಕೆ ಜಿ ನಾಯ್ಕ್, ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ್ ನಾಯಕ್, ರವಿ ಹೆಗಡೆ ಹೂವಿನಮನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.