ಶಿರಸಿ: ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಏ.9ರಂದು ಅಂಬಾಗಿರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಪೂರ್ವ ತಯಾರಿಗಾಗಿ ನಿನ್ನೆ ಕರೆಯಲಾದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯ ಪ್ರಾರಂಭದಲ್ಲಿ ಆಮಂತ್ರಣಪತ್ರಿಕೆಯನ್ನು ದೇವಳದ ದಿಗ್ದರ್ಶಕರು ಬಿಡುಗಡೆ ಮಾಡಿದರು.ಶ್ರೀಗಳ ಪೂರ್ಣಕುಂಭ ಸ್ವಾಗತಕ್ಕೆ ಮಾತೃಮಂಡಳಿ ಸದಸ್ಯೆಯರು ಅಗತ್ಯ ಪರಿಕರಗಳೊಂದಿಗೆ ಬೆಳಿಗ್ಗೆ ಎಂಟು ಗಂಟೆಯೊಳಗೆ ಉಪಸ್ಥಿತರಿರಲು ಕೋರಲಾಯಿತು.
ಎಲ್ಲರ ಪರವಾಗಿ ಸಮೀತಿಯಿಂದ ಸಾಮೂಹಿಕ ಫಲ ಸಮರ್ಪಣೆ ಮಾಡಲಾಗುವದು ಎಂದು ಅಧ್ಯಕ್ಷ ರು ಸೂಚಿಸಿದರು.ಪ್ರತಿಯೊಬ್ಬ ಶಿಷ್ಯರಿಗೆ ಆಮಂತ್ರಣ ನೀಡಿ ಅವರು ಬರುವಂತೆ, ಸಂಬಂಧಿಸಿದವರಿಗೆ ಅವರು ಕೋರಿದರು.
ಈ ಸಂಧರ್ಭದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಧನಸಹಾಯ ಸಮರ್ಪಿಸಲು ಅವಕಾಶವಿದ್ದು ಹಿಂದಿನ ದಿನ ಸಂಜೆಯೊಳಗೆ ಹೆಸರು ತಿಳಿಸಲು ಕೋರಿದೆ.ಇದರ ಹೊರತಾಗಿ ಶ್ರೀಗಳ ವಾಸ್ತವ್ಯದ ಮನೆಗಳಲ್ಲಿಯೂ ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಬಹುದು.
ಶ್ರೀಗಳ ಆಗಮನದ ವೇಳೆ ಅಗತ್ಯತೋರಣ, ಶಿಲಾನ್ಯಾಸ ಸ್ಥಳ ತಯಾರಿ,ದೇವಿಗೆ ಅಲಂಕಾರ, ವಾದ್ಯ, ಬ್ಯಾನರ್, ಛಾಯಾಗ್ರಹಣ, ಉಪಾಹಾರ, ಇತ್ಯಾದಿ ವ್ಯವಸ್ಥೆ ಕುರಿತು ನಿರ್ಮಾಣ ಮತ್ತು ನಿರ್ವಹಣ ಸಮೀತಿ, ವಲಯ, ಮಂಡಲಗಳ ಜೊತಗೂಡಿ ಕಾರ್ಯ ನಿರ್ವಹಿಸಲು ಚರ್ಚಿಸಲಾಯಿತು.
ಈ ಸಭೆಯಲ್ಲಿ ಉಭಯ ಸಮೀತಿಗಳ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರೂ, ವಲಯ ಉಪಾಧ್ಯಕ್ಷರೂ, ಶ್ರೀ ಸಂಯೋಜಕರು, ಸಮೀತಿಗಳ ಪದಾಧಿಕಾರಿಗಳು, ಸದಸ್ಯರುಗಳು, ಮಾತೃ ಮಂಡಳಿ ಪ್ರಮುಖರು ಭಾಗವಹಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.