Slide
Slide
Slide
previous arrow
next arrow

ಆರ್.ವಿ.ದೇಶಪಾಂಡೆ ಜನ್ಮದಿನ: ವಿಶೇಷ ಪೂಜೆ

300x250 AD

ದಾಂಡೇಲಿ: ಶಾಸಕ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಜನ್ಮದಿನದ ನಿಮಿತ್ತವಾಗಿ ದಾಂಡೇಲಿ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ ನಂದ್ಯಾಳ್ಕರ್ ಅವರ ನೇತೃತ್ವದಲ್ಲಿ ಅಂಬೇವಾಡಿಯಲ್ಲಿರುವ ಬಲಮುರಿ ಶ್ರೀಮಹಾ ಗಣಪತಿ ದೇವಸ್ಥಾನದಲ್ಲಿ ಹೋಮ ಹವನ ಹಾಗೂ ವಿಶೇಷ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆರ್.ವಿ.ದೇಶಪಾಂಡೆ ಅವರಿಗೆ ಆಯುಷ್ಯ, ಆರೋಗ್ಯವನ್ನು ಭಗವಂತ ದಯಪಾಲಿಸಲೆಂದು ಪ್ರಾರ್ಥಿಸಿ ಪೂಜೆಯನ್ನು ಸಲ್ಲಿಸಲಾಯಿತು. ಪೂಜೆಯಾದ ಬಳಿಕ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಂಜಯ ನಂದ್ಯಾಳ್ಕರ್ ಸೇರಿದಂತೆ ವಾರ್ಡಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top