Slide
Slide
Slide
previous arrow
next arrow

ಕದಂಬೋತ್ಸವ: ಪೂರ್ವಸಿದ್ಧತೆ ಪರಿಶೀಲಿಸಿದ ಸಚಿವ ವೈದ್ಯ

300x250 AD

ಬನವಾಸಿ: ಮಾ.5 ಹಾಗೂ 6 ರಂದು ನಡೆಯಲಿರುವ  ಕದಂಬೋತ್ಸವ ಮೈದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಪೂರ್ವ ಸಿದ್ದತೆಯ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು  ಕದಂಬೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು. ಕದಂಬೋತ್ಸವಕ್ಕೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಚತಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕದಂಬೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ನಿಗವಹಿಸಿ ಎಂದು ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ಆದೇಶಿಸಿದರು.

ಈಗಾಗಲೇ ಅದ್ದೂರಿ ಕದಂಬೋತ್ಸವಕ್ಕೆ ಕದಂಬೋತ್ಸವ ಮೈದಾನದಲ್ಲಿ ಸಕಲ ಸಿದ್ದಾತೆಗಳು ನಡೆಯುತ್ತಿದೆ. ಮಯೂರ ವರ್ಮ ವೇದಿಕೆ ಹಾಗೂ ವೇದಿಕೆಯ ಮುಂಭಾಗದಲ್ಲಿ ಬೃಹತ್ ಪ್ರಮಾಣದ ಪೆಂಡಲ್ ಹಾಕಲಾಗುತ್ತಿದೆ. ಫಲಪುಷ್ಪ ಪ್ರದರ್ಶನದ ತಯಾರಿಗೊಳ್ಳುತ್ತಿದ್ದು, ಕದಂಬೋತ್ಸವದ ಪ್ರಯುಕ್ತ ಜರುಗಲಿರುವ ಕ್ರೀಡಾಕೂಟಗಳಿಗೆ ಕ್ರೀಡಾಂಗಣ ಕಾರ್ಯ ಪೂರ್ಣಗೊಂಡಿದೆ.  ಪ್ರಥಮ ಬಾರಿಗೆ ಕುಸ್ತಿ  ಸ್ಪರ್ಧೆ ಏರ್ಪಡಿಸಿದ್ದು ಕುಸ್ತಿ ಪಂದ್ಯದ ಅಖಾಡ ಸಜ್ಜುಗೊಳಿಸಲಾಗಿದ್ದು, ಎಲ್ಲ ಪೂರ್ವಸಿದ್ಧತೆಯನ್ನು ಸಚಿವರು ವೀಕ್ಷಿಸಿದರು.

300x250 AD

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಶ್ರೀಕೃಷ್ಣ ಕಾಮಕರ್, ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾಸಿಮ್ ಖಾನ್,  ಕಾಂಗ್ರೆಸ್ ಮುಖಂಡರಾದ ಸಿ.ಎಫ್ ನಾಯ್ಕ್, ಶ್ರೀನಿವಾಸ ಧಾತ್ರಿ, ಶಿವಾಜಿ ಕಾಳೇರಮನೆ, ಶ್ರೀಲತಾ ಕಾಳೇರಮನೆ ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top