Slide
Slide
Slide
previous arrow
next arrow

ಶ್ರೀಮನ್ನೆಲೆಮಾವು ಮಠದಲ್ಲಿ ರುದ್ರಾಭಿಷೇಕ ಸಂಪನ್ನ

300x250 AD

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳು ಸನ್ಯಾಸ ದೀಕ್ಷೆ ಸ್ವೀಕರಿಸಿ ಎರಡು ವರ್ಷ ಆಗುತ್ತಿರುವುದರಿಂದ ಗುರುವಾರ ಶ್ರೀಮಠದಲ್ಲಿ ಮಠದ ಪುರೋಹಿತರಾದ ವಿದ್ವಾನ್ ವಿನಾಯಕ ಭಟ್ಟ ವಾಟೇಕೊಪ್ಪ ಮತ್ತು ಅರ್ಚಕ ವಿಶ್ವೇಶ್ವರ ಭಟ್ಟ ಅವರ ನೇತೃತ್ವದಲ್ಲಿ ೨೫ಕ್ಕೂ ಹೆಚ್ಚು ಜನರಿಂದ ಎರಡು ಆವೃತ್ತಿ ಶತರುದ್ರ ಅನುಷ್ಠಾನ ಮತ್ತು ಚಂದ್ರಮೌಳೀಶ್ವರ ದೇವರಿಗೆ ರುದ್ರಾಭಿಷೇಕ ಜರುಗಿತು.ಈ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಶಿಷ್ಯವೃಂದದವರಿದ್ದರು.

300x250 AD
Share This
300x250 AD
300x250 AD
300x250 AD
Back to top