ಹೊನ್ನಾವರ: ಪಟ್ಟಣದ ಪ್ರತಿಭೋದಯ ಹಾಲ್ ಎದುರು ಅಕ್ರಮವಾಗಿ, ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಅಧಿಕೃತ ಪಾಸ್, ಪರ್ಮಿಟ್ ಇಲ್ಲದೇ, ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟಮೆಂಟಿನ ವ್ಯವಸ್ಥೆ ಮಾಡದೆ ಹಾಗೂ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ, ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಜಾನುವಾರುಗಳನ್ನು ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಿಂಗಾಪುರ ಬೆಳಗಾಲಪೇಟೆ ನಿವಾಸಿಗಳಾದ ರೆಹಮಾನ್ ಸಾಬ್ ರಾಜೇಸಾಬ್ ರಿತ್ತಿ,ನವೀದ್ ರಾಜೇಸಾಬ್ ರಿತ್ತಿ,ಯಲ್ಲಪ್ಪ ಬಂಕಪ್ಪ ಶಿವಣ್ಣನವರ ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿದ್ದು ಆರೋಪಿಗಳ ಸಮೇತ 4 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು ಅಂದಾಜು 70,000 ಮೌಲ್ಯದ ಜಾನುವಾರು ಎಂದು ಅಂದಾಜಿಸಲಾಗಿದೆ.ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.