Slide
Slide
Slide
previous arrow
next arrow

ದಾಂಡೇಲಿಯಲ್ಲಿ ಪರ್ತಗಾಳಿ ಶ್ರೀಗಳಿಂದ ತಪ್ತ ಮುದ್ರಾಧಾರಣೆ

300x250 AD

ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಗೋಕರ್ಣ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾನುವಾರ ಬೆಳಿಗ್ಗೆ ಪರಮ ಪೂಜ್ಯ ಶ್ರೀ ಪರ್ತಗಾಳಿ ಸ್ವಾಮಿಜಿಗಳವರು ಅಂತರಂಗ ಶುದ್ಧಿಯ ಸಂಕೇತದ ತಪ್ತ ಮುದ್ರಾಧಾರಣೆಯನ್ನು ಹಾಕಿ ಭಕ್ತಾದಿಗಳನ್ನು ಅನುಗ್ರಹಿಸಿದರು.

ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಮುದ್ರಾಧಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯರಿಂದ ಮುದ್ರೆಯನ್ನು ಹಾಕಿಸಿಕೊಂಡರು. ಮುದ್ರಧಾರಣೆಯಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಕುಟುಂಬಸ್ಥರ‌ ಜೊತೆ ಆಗಮಿಸಿ‌ ಮುದ್ರೆ ಹಾಕಿಸಿಕೊಂಡರು.

ಆ ಬಳಿಕ ಕುಮಟಾ ಮೂಲದ ಸದ್ಯ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಾನಂದ ಪ್ರಭು ಸಂಗಡಿಗರಿಂದ ಭಜನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

300x250 AD

Share This
300x250 AD
300x250 AD
300x250 AD
Back to top