Slide
Slide
Slide
previous arrow
next arrow

ಜ.7ಕ್ಕೆ ತಾಳಮದ್ದಲೆ ತರಬೇತಿ ವರ್ಗದ ದಶಮಾನೋತ್ಸವ

300x250 AD

ಶಿರಸಿ: ಇಲ್ಲಿನ ಅಭಿಮಾನ ಸಾಂಸ್ಕೃತಿಕ ವೇದಿಕೆ ವತಿಯಿಂದ ತಾಳಮದ್ದಲೆ ತರಬೇತಿ ವರ್ಗದ ದಶಮಾನೋತ್ಸವ ಕಾರ್ಯಕ್ರಮವನ್ನು ಜ.7,ರವಿವಾರ ಅಪರಾಹ್ನ 4 ಗಂಟೆಯಿಂದ ನಗರದ ಯೋಗಮಂದಿರದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ‘ಸುಧನ್ವ ಮೋಕ್ಷ’ ಆಖ್ಯಾನ ಪ್ರದರ್ಶನಗೊಳ್ಳಲಿದ್ದು, ಭಾಗವತಿಕೆಯಲ್ಲಿ ಶ್ರೀಧರ ಹೆಗಡೆ ಹಣಗಾರು, ಗಜಾನನ ಭಟ್ ತುಳಗೇರಿ, ಮೃದಂಗದಲ್ಲಿ ವಿಠ್ಠಲ ಪೂಜಾರಿ ಮಂಚಿಕೇರಿ ಸಹಕರಿಸಲಿದ್ದಾರೆ.

ಮುಮ್ಮೇಳದಲ್ಲಿ ಸುಬ್ರಾಯ ಹೆಗಡೆ ಕೆರೆಕೊಪ್ಪ, ಮಂಜುನಾಥ ಗೋರ್ಮನೆ, ಶ್ರೀನಿವಾಸ ಮತ್ತಿಘಟ್ಟ, ವಿ.ರಾಮಚಂದ್ರ ಭಟ್ ಶಿರಳಗಿ ಕಾಣಿಸಿಕೊಳ್ಳಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಪ್ರೋತ್ಸಾಹಿಸಲು ಸಂಘಟಕರು ಕೋರಿದ್ದಾರೆ.

Share This
300x250 AD
300x250 AD
300x250 AD
Back to top