ಹೊನ್ನಾವರ: ಹದಿಹರೆಯದವರಲ್ಲಿ ಮೊಬೈಲ್ ಬಳಕೆ ದಿನೆ ದಿನೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಭವಿಷ್ಯದಲ್ಲಿ ಉತ್ತಮ ಆರೋಗ್ಯ ಉಳಿಸಿಕೊಳ್ಳಬೇಕಾದರೆ ಮೊಬೈಲ್ ಗೀಳಿನಿಂದ ದೂರವಿರಬೇಕು ಎಂದು ತಾಲೂಕ ಆಸ್ಪತ್ರೆಯ ಐ.ಸಿ.ಟಿ.ಸಿ ವಿಭಾಗದ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಹೇಳಿದರು.
ಅವರು ನ್ಯೂ ಇಂಗ್ಲಿಷ್ ಕನ್ನಡ ಮಾಧ್ಯಮ ಹೈಸ್ಕೂಲಿನಲ್ಲಿ ಆರೋಗ್ಯ ಇಲಾಖೆಯಿಂದ ನಡೆದ “ಹದಿಹರಯೆದ ಆರೋಗ್ಯ ಶಿಕ್ಷಣ” ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹದಿಹರೆಯದ ಮನಸ್ಸುಗಳು ಚಿಕ್ಕ ಪುಟ್ಟ ಘಟನೆಗಳಿಗೂ ಪ್ರಚೋದನೆಗೆ ಒಳಗಾಗುತ್ತವೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಗೀಳಿಗೆ ಒಳಗಾದರೆ ಅನಾಹುತಕಾರಿ ದುಶ್ಚಟಗಳಿಗೆ ಒಳಗಾಗುವ ಸಾದ್ಯತೆಗಳು ಹೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನಂಬಿ ಮೋಸ ಹೋಗುವಿಕೆ ಹದಿಹರೆಯದವರಲ್ಲಿ ಹೆಚ್ಚಿದೆ. ಹದಿನೆಂಟು ವರ್ಷದ ಒಳಗಿನ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಮೊಬೈಲ್ ಬಳಕೆ ಅವಧಿಯನ್ನು ನಿಯಂತ್ರಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ, ಮಾನಸಿಕ ಅಸ್ಥತತೆ,ಒಂಟಿತನ, ಊಟ ಸೇರದಿರವುದು, ದೃಷ್ಠಿದೋಶ ಮೊದಲಾದ ದೇಹದಲ್ಲಿ ನಿಶ್ಯಕ್ತಿ, ಮೊದಲಾದ ತೊಂದರೆಗಳು ಕಾಣಿಸಿಕೊಂಡು ಆರೋಗ್ಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದು ಹೇಳಿದರು.
ಕಾರ್ಯಗಾರದಲ್ಲಿ ಉಪಸ್ಥಿತರಿದ ಶಾಲಾ ಮುಖ್ಯೋಧ್ಯಾಪಕರಾದ ಜಯಂತ ನಾಯ್ಕ ಮಾತನಾಡಿ ಹದಿಹರೆಯದಲ್ಲಿ ಮಾನಸಿಕ, ದೈಹಿಕ ಬದಲಾವಣೆಗಳ ತ್ವರಿತಗತಿಯಲ್ಲಿ ಆಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂತಹ ಕಾರ್ಯಗಾರಗಳ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು ಶಾಲಾ ಶಿಕ್ಷಕರು ಕಾರ್ಯಗಾರಲ್ಲಿ ಉಪಸ್ಥಿತರಿದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದರು.