Slide
Slide
Slide
previous arrow
next arrow

ಸಮರ್ಪಣದಿಂದ ದತ್ತಾತ್ರಯ ಶೇಟ್’ಗೆ ಸನ್ಮಾನ: ಗೌರವ ಸಮರ್ಪಣೆ

300x250 AD

ಅಂಕೋಲಾ‌ : ಸೇವಾ ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿ ಸಾಮಾಜಿಕ‌ ಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಜನ್ಮತಳೆದ ಸಮರ್ಪಣಾ ನಿವೃತ್ತ ಶಿಕ್ಷಕರ ಸಂಘವು ಒಂದು ವರ್ಷವನ್ನು ಪೂರೈಸಿದ್ದು ಈ ಸಂದರ್ಭದಲ್ಲಿ 98 ವರ್ಷ ವಯಸ್ಸಿನ ಅಲಗೇರಿಯ ದತ್ತಾತ್ರಯ ರಾಮಚಂದ್ರ ಶೇಟ್ ಅವರನ್ನು ಸಂಘದ ವತಿಯಿಂದ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ದತ್ತಾತ್ರಯ ಶೇಟ್‌ ಸಮರ್ಪಣ ನಿವೃತ್ತ ಶಿಕ್ಷಕರ ಸಂಘದವರ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು. ಅಲಗೇರಿಯ ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ನಾಯಕ ಮಾತನಾಡಿ ಸಮರ್ಪಣದವರ ಕಾರ್ಯ ಅತ್ಯಂತ ಶ್ರೇಷ್ಠವಾದುದು. ಅತ್ಯಂತ ಹಿರಿಯ ಶಿಕ್ಷಕ ದತ್ತಾತ್ರಯ ಅವರನ್ನು ಗುರುತಿಸಿ ಗೌರವಿಸಿರುವುದು ನಮ್ಮ ಊರಿಗೇ ಹೆಮ್ಮೆ ತಂದಿದೆ ಎಂದರು. ಸಮರ್ಪಣದ ಕಾರ್ಯದರ್ಶಿ ರಮೇಶ ನಾಯಕ ಪ್ರಾಸ್ತಾವಿಕ ಮಾತನಾಡಿ ದತ್ತಾತ್ರಯ ಶೇಟ್ ಅವರು 98 ವರ್ಷ ವಯಸ್ಸಿನಲ್ಲೂ ಲವಲವಿಕೆಯಿಂದ ಇರುವುದು ನಿವೃತ್ತ ಶಿಕ್ಷಕರಿಗೆಲ್ಲ ಪ್ರೇರಣೆ ಎಂದರು. ಗೋಪಾಲ ಆರ್. ನಾಯಕ‌ ಮಾತನಾಡಿ ದತ್ತಾತ್ರಯ ಶೇಟ್ ಅವರು ಸೇವೆ ಸಲ್ಲಿಸಿದ ಅವಧಿ ಅತ್ಯಂತ ಕಷ್ಟಕರವಾಗಿತ್ತು. ಕಡಿಮೆ ಸಂಬಳದಲ್ಲಿ ದೊಡ್ಡ ಕುಟುಂಬದ ನಿರ್ವಹಣೆ ಮಾಡುವದು ಸವಾಲಾಗಿದ್ದರೂ ತಮ್ಮ ಪ್ರಾಮಾಣಿಕ ಸೇವೆಯಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ ಎಂದರು.

ಸಮರ್ಪಣದ ಅಧ್ಯಕ್ಷ ನಾರಾಯಣ ಬಿ ನಾಯಕ ಸೂರ್ವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದತ್ತಾತ್ರಯ ಶೇಟ್ ಅತ್ಯಂತ ಸುಧೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲೂಕಿನ ಅತ್ಯಂತ ಹಿರಿಯ ನಿವೃತ್ತ ಶಿಕ್ಷಕರು. ಇಂತಹ ಹಿರಿಯರನ್ನು ಸನ್ಮಾನಿಸಿ ಅವರ ಆಶೀರ್ವಾದ ಪಡೆಯುವದು ಸಮರ್ಪಣದ ಸದಸ್ಯರಿಗೆ ಆತ್ಮಸಂತೃಪ್ತಿ ನೀಡಿದೆ ಎಂದರು.
ಗೋಪಾಲ‌ ಆರ್. ನಾಯಕ ಸನ್ಮಾನಿತರನ್ನು ಪರಿಚಯಿಸಿ ಅವರು ಸೇವೆ ಸಲ್ಲಿಸಿದ ಅವಧಿ ಅತ್ಯಂತ ಕಷ್ಟಕರವಾಗಿತ್ತು, ಕಡಿಮೆ ಸಂಬಳದಲ್ಲಿ ದೊಡ್ಡ ಕುಟುಂಬವನ್ನು ನಿರ್ವಹಿಸುವುದು ಸವಾಲಾಗಿದ್ದರೂ ಸಮರ್ಥವಾಗಿ ನಿಭಾಯಿಸಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದರು ಎಂದರು. ಕಾರ್ಯದರ್ಶಿ ರಮೇಶ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪಾಂಡುರಂಗ ನಾಯಕ ಹೊನ್ನಪ್ಪ ನಾಯಕ ಮಾತನಾಡಿದರು. ಪಾಂಡುರಂಗ ಶೇಟ್ ಸ್ವಾಗತಿಸಿದರು. ರಮೇಶ ನಾಯಕ ಮತ್ತು ಪಾಂಡುರಂಗ ಶೇಟ್ ಪ್ರಾಯೋಜಕತ್ವವನ್ನು ವಹಿಸಿದ್ದರು.

300x250 AD

ಈ ಸಂದರ್ಭದಲ್ಲಿ ಸಮರ್ಪಣದ ಉಪಾಧ್ಯಕ್ಷ ಗೋಪಾಲ ವಿ ನಾಯಕ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ನಾಯಕ, ವಿಜಯ ನಾಯಕ, ಗೋಪಾಲ‌ ನಾಯಕ, ಸಣ್ಣಪ್ಪ ರಾಯ್ಕರ, ದೇವಾನಂದ ನಾಯಕ, ಕುಟುಂಬಸ್ಥರಾದ ಪ್ರಶಾಂತ, ಗಣೇಶ, ಸುಮಾ, ಪುಷ್ಪಾ, ಸೃಷ್ಟಿ, ಸಮೃದ್ಧಿ, ಪ್ರೀತಮ್, ಪ್ರಾರ್ಥನಾ, ಸುಶೀಲಾ ಇದ್ದರು.

Share This
300x250 AD
300x250 AD
300x250 AD
Back to top