Slide
Slide
Slide
previous arrow
next arrow

ಭಟ್ಕಳದಲ್ಲಿ ನವಜಾತ ಶಿಶು ಆರೈಕೆ ವಾರ ಕಾರ್ಯಕ್ರಮ

300x250 AD

ಭಟ್ಕಳ: ತಾಲೂಕು ಆಸ್ಪತ್ರೆ ಭಟ್ಕಳ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಭಟ್ಕಳ ಹಾಗೂ ಆರ್.ಎನ್. ಎಸ್‌. ಕಾಲೇಜ್ ಆಫ್ ನರ್ಸಿಂಗ್ ಇವರ ಸಹಯೋಗದಲ್ಲಿ ನಡೆದ ನವಜಾತ ಶಿಶು ಆರೈಕೆ ವಾರ ಕಾರ್ಯಕ್ರಮವನ್ನು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಹರ್ಷ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಗು ಜನ್ಮ ತಳೆದ ಒಂದು ತಿಂಗಳ ಒಳಗೆ ಸಾವನ್ನಪ್ಪುವುದನ್ನು ತಪ್ಪಿಸಲು ಶಿಶು ಆರೈಕೆ ಅತ್ಯಗತ್ಯವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಪದ್ಮಶ್ರೀ ಸುಕ್ರಿ ಗೌಡ ಉಪಸ್ಥಿತಿ ವೇದಿಕೆಯ ಅಂದವನ್ನು ಹೆಚ್ಚಿಸಿದೆ ಎಂದು ವಿವರಿಸಿದರು. ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್‌ ಮಾತನಾಡಿ, ನಿಂತ ನೀರಿಗಿಂತ ಹರಿಯುವ ನೀರಿಗೆ ಹೆಚ್ಚಿನ ಬೆಲೆ ಇದೆ. ಆಸ್ಪತ್ರೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೊಸ ಚಿಂತನೆಯನ್ನು ಅನುಷ್ಠಾನಗೊಳಿಸಬೇಕಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಪದಶ್ರೀ ಸುಕ್ರಿ ಬೊಮ್ಮನಗೌಡ ಮಾತನಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಒಳ್ಳೆಯ ಹೆಸರು ಇದೆ. ಆಸ್ಪತ್ರೆಯಲ್ಲಿ ಜನರಿಗೆ ಮತ್ತಷ್ಟು ವೈದ್ಯಕೀಯ ಸೇವೆ ಗುಣಮಟ್ಟದ ಮುಂದುವರಿಯಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮನ ಗೌಡ ಹೇಳಿದರು.

300x250 AD

ಮಕ್ಕಳ ತಜ್ಞ ಸುರಕ್ಷಿತ ಶೆಟ್ಟಿ ಮಾತನಾಡಿ, ಪ್ರಸಕ್ತವಾಗಿ ನವಜಾತ ಶಿಶು ಮರಣದ ಪ್ರಮಾಣ 21% ನಷ್ಟಿದೆ. ಇದನ್ನು ಇನ್ನಷ್ಟು ಕಡಿತಗೊಳಿಸಲು ಶಿಶು ಆರೈಕೆಗೆ ಒತ್ತು ನೀಡಬೇಕು. ಈ ಬಗ್ಗೆ ಎಲ್ಲರೂ ಮಾಹಿತಿಯನ್ನು ಹೊಂದಬೇಕಾಗಿದೆ ಎಂದರು.

ಆರ್.ಎನ್‌.ಎಸ್. ಕಾಲೇಜ್ ಆಫ್ ನರ್ಸಿಂಗ್ ಮುರುಡೇಶ್ವರ ಇದರ ಪ್ರಾಚಾರ್ಯ ಪ್ರೋ.ಕೇಶವಮೂರ್ತಿ ಸಿ.ಡಿ., ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಸಹನ್‌ ಕುಮಾರ್, ರಮ್ಯಾ ಚಾರ್ಜ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಂಜುಳಾ ಸ್ವಾಗತಿಸಿದರು. ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಪೂರ್ವದಲ್ಲಿ ಆರ್‌ಎನ್‌ಎಸ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸ್ವಾಗತ ನೃತ್ಯ ಮಾಡಿದರು

Share This
300x250 AD
300x250 AD
300x250 AD
Back to top