ಶಿರಸಿ: ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಪ್ರಾಂಗಣದಲ್ಲಿ ಶಿರಸಿ ಲಯನ್ಸ ಶಾಲಾ ಕಾಲೇಜುಗಳ ಸಮೂಹ ಶಿರಸಿ ಲಯನ್ಸ್ ಎಜುಕೆಷನ್ ಸೊಸೈಟಿ, ಶಿರಸಿ ಲಯನ್ಸ ಕ್ಲಬ್ ಸಹಯೊಗದಲ್ಲಿ ಸುವರ್ಣ ಸಂಭ್ರಮದ ರಾಜ್ಯೋತ್ಸವ ಆಚರಣೆ ಜರುಗಿತು.
ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಲ.ಪ್ರೊ.ರವಿ ನಾಯಕ್ ಶುಭ ಹಾರೈಸಿ, ಕನ್ನಡಾಭಿಮಾನ ನಮ್ಮುಸಿರಾಗಿರಲಿ, ಕನ್ನಡತನ ನಮ್ಮ ಜೀವನ ಕ್ರಮವಾಗಲಿ ಎಂದು ನುಡಿದರು. ಲಯನ್ಸ್ ಸಮೂಹ ಶಾಲೆಗಳ ಪ್ರಾಂಶುಪಾಲರಾದ ಶಶಾಂಕ ಹೆಗಡೆಯವರು ಸರ್ವರಿಗೂ ವಂದಿಸಿದರು. ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಅಶ್ವತ್ಥ ಹೆಗಡೆ, ಕೋಶಾಧ್ಯಕ್ಷರಾದ ಲಯನ್ ಶರಾವತಿ ಭಟ್ ಸೇರಿದಂತೆ ಲಯನ್ ಡಾ.ಜಿ.ಎ. ಹೆಗಡೆ ಸೊಂದಾ, ಲಯನ್ ಶ್ರೀಕಾಂತ ಹೆಗಡೆ, ಲಯನ್ ಅಶ್ವತ್ಥ ಹೆಗಡೆ, ಲಯನ್ ಅಶ್ವತ್ಥ ಹೆಗಡೆ ಮುಳಖಂಡ, ಲಯನ್ ಸುಮಂಗಲಾ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಪಾಲಕರು, ಶಿಕ್ಷಕೇತರ ಸಿಬ್ಬಂದಿಗಳನ್ನೊಳಗೊಂಡು ನೂರಾರು ಕಂಠ ಸಿರಿಯಲ್ಲಿ ಕನ್ನಡದ ಪ್ರಸಿದ್ಧ ಕವಿಗಳ ಗೀತೆಗಳ ಗಾಯನ ಮೊಳಗಿತು.
ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ತಂಡ, ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರ್ ಮತ್ತು ಗೈಡ್ಸ್ ಟೀಚರ್ ಶ್ರೀಮತಿ ಚೇತನಾ ಪಾವಸ್ಕರ್ ನೇತೃತ್ವದಲ್ಲಿ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ತಾಲ್ಲೂಕಾ ಆಡಳಿತದ ವತಿಯಿಂದ ಆಚರಿಸಿದ 50 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಪಥಸಂಚಲನದಲ್ಲಿ ಭಾಗವಹಿಸಿದರು.