Slide
Slide
Slide
previous arrow
next arrow

ಶಿಕ್ಷಕ ಎನ್.ವಿ.ಹೆಗಡೆ ನಿವೃತ್ತಿ; ಹೃದಯಸ್ಪರ್ಶಿ ಬೀಳ್ಕೊಡುಗೆ

300x250 AD

ಸಿದ್ದಾಪುರ: ತಾಲೂಕಿನ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿಯಲ್ಲಿ‌ ಕಳೆದ 28ಕ್ಕೂ ಅಧಿಕ ವರ್ಷಗಳ ಕಾಲ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಾಗಪತಿ ವೆಂಕಟ್ರಮಣ ಹೆಗಡೆ ಅ.31ರಂದು ನಿವೃತ್ತಿಗೊಂಡಿದ್ದು, ಹೃದಯಸ್ಪರ್ಶಿ ಬೀಳ್ಕೊಡುಗೆಯನ್ನು ನೀಡಲಾಯಿತು.

ಸದಾ ಹಸನ್ಮುಖಿಯ ಶ್ರೀಯುತರು ಎನ್. ವಿ. ಸರ್ ಎಂದೇ ಜನಮಾನಸದಲ್ಲಿ ನೆಲೆಸಿದವರು. ಶಿಸ್ತು, ಸರಳತೆ‌‌ಗೆ ಹೆಸರಾದವರು.1995 ಸೆಪ್ಟೆಂಬರ್ 1ರಂದು ಹೆಗ್ಗರಣಿಯಲ್ಲಿ ಸೇವೆಗೆ ಸೇರಿ 2023ರ ಅಕ್ಟೋಬರ್ 31ಕ್ಕೆ ನಿವೃತ್ತಿ ಹೊಂದಿದ ಇವರಿಗೆ ಶಿಕ್ಷಣ ಸೇವಾ ಸಮಿತಿ ಹಾಗೂ ಪ್ರೌಢಶಾಲೆ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷರಾದ ಎನ್. ಆರ್. ಭಟ್ ಧರೆ ಇವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಎನ್. ವಿ. ಸರ್ ಅವರ ಶಿಸ್ತಿನ ಜೀವನ ಎಲ್ಲರಿಗೂ ಆದರ್ಶವಾಗಿದೆ. ನಮ್ಮ ಪ್ರೌಢಶಾಲೆಯ ಪ್ರಗತಿ ಪಥದಲ್ಲಿ ಇವರ ಕೊಡುಗೆ ತುಂಬಾ ಇದೆ. ನಮ್ಮ‌ ನಿಮ್ಮ ಈ ಸಂಬಂಧ ಕೊನೆ ತನಕ ಹೀಗೆ ಇರಲಿ. ನಮ್ಮ‌ ಶಾಲೆಗೆ ಯಾವಾಗಲೂ ನಿಮಗೆ ಸ್ವಾಗತ ಇರುತ್ತದೆ ಎಂದು ಹೇಳಿದರು.

300x250 AD

ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಶಿಕ್ಷಕ ಎನ್.ವಿ ಹೆಗಡೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.‌ ವರ್ಗಾವಣೆಗೊಂಡ ನಂತರ ಹೆಗ್ಗರಣಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟು, ಪ್ರತೀ ಹಂತದಲ್ಲೂ ಸಹಕರಿಸಿದ ಶಿಕ್ಷಣ ಸೇವಾ ಸಮಿತಿಯ ಸದಸ್ಯರಿಗೆ, ಸಹದ್ಯೋಗಿಗಳಿಗೆ, ಸಮಾಜ ಬಾಂಧವರಿಗೆ, ಕುಟುಂಬದವರಿಗೆ ಧನ್ಯವಾದ ತಿಳಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಶೈಕ್ಷಣಿಕ ವರ್ಷ ಮುಗಿಯುವವರೆಗೂ ತರಗತಿಗಳನ್ನು ನಡೆಸುವ ನಿರ್ಧಾರವನ್ನು ಅವರು ತಿಳಿಸಿದ್ದಾರೆ. ಇದೇ ವೇಳೆ 40 ಸಾವಿರ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದು, ಶಾಲೆಯ ಬಗೆಗಿನ ಕಾಳಜಿ ಪ್ರೀತಿಯನ್ನು ತೋರಿದ್ದಾರೆ.

ಶಿಕ್ಷಣ ಸೇವಾ ಸಮಿತಿಯ ಕಾರ್ಯದರ್ಶಿ ಕೃಪಾಕರ ಭಟ್, ಸಹ ಶಿಕ್ಷಕರಾದ ‌ವಿ.ಎಸ್. ಭಟ್, ವಿದ್ಯಾರ್ಥಿಗಳಾದ ಮದನ್ ಹಾಗೂ ನಿತ್ಯಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಎನ್.ವಿ. ಹೆಗಡೆ ದಂಪತಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಉಡುಗೊರೆ ನೀಡಿದ್ದು ವಿಶೇಷವಾಗಿತ್ತು.
ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಶಾಂತ ಸಿ.ಎಂ. ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಹೆಗಡೆ ವಂದಿಸಿದರು. ಎಂ.ಎಂ‌. ಭಟ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕ,‌ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

Share This
300x250 AD
300x250 AD
300x250 AD
Back to top