ಹಳಿಯಾಳ: ಇಲ್ಲಿನ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದಲ್ಲಿ ತರಬೇತಿ ಪಡೆದ ಅಮನ್ ಕತೀಬ್ ಕೌಶಲ್ಯ ಸ್ಪರ್ಧೆಯ ವೆಲ್ಡಿಂಗ್ ಟೆಕ್ನಿಷಿಯನ್ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ತರಬೇತಿಯ ನಂತರ ಧಾರವಾಡದ ಟಾಟಾ ಹಿಟಾಚಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಟಾಟಾ ಹಿಟಾಚಿ ಹಮ್ಮಿಕೊಂಡಿದ್ದ ಜಪಾನ್ ದೇಶದ ಪ್ರತಿಭಾನ್ವಿತ ಅಂತರಾಷ್ಟ್ರೀಯ ಕೌಶಲ್ಯ ಸ್ಪರ್ಧೆಯ ವೆಲ್ಡಿಂಗ್ ವಿಭಾಗದಲ್ಲಿ ಭಾಗವಹಿಸಿ ತೃತೀಯ ಸ್ಥಾನದೊಂದಿಗೆ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೌಶಲ್ಯ ಕ್ಷೇತ್ರದಲ್ಲಿ ಮಿಂಚಿನ ಸಂಚಾರದೊAದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇವರು ತೋರಿರುವ ಮಹಾನ್ ಸಾಧನೆ ಇಂದಿನ ಯುವ ತಲೆಮಾರಿನವರಿಗೆ ಮಾದರಿಯಾಗಿದ್ದು, ತಾಲೂಕಿನ ಸಮಸ್ತ ಜನತೆ ಹೆಮ್ಮೆ ಪಡುವ ಸಂಗತಿಯಾಗಿದೆ. ಇವರ ಈ ಅಮೋಘ ಸಾಧನೆಗೆ ಅಂತರಾಷ್ಟ್ರೀಯ ಪ್ರಶಸ್ತಿಯ ಕಿರೀಟ ಬಂದಿರುವುದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ತೋರುವುದರೊಂದಿಗೆ ನಾಡಿಗೆ ಇನ್ನಷ್ಟು ಕೀರ್ತಿ ತರುವಂತಾಗಲೆಂದು ಶಾಸಕ ಆರ್.ವಿ.ದೇಶಪಾಂಡೆ ಶುಭ ಹಾರೈಸಿದ್ದಾರೆ.