Slide
Slide
Slide
previous arrow
next arrow

ಸಮಯಕ್ಕೆ ಸರಿಯಾಗಿರದ ಬಸ್ : ವಿದ್ಯಾರ್ಥಿಗಳಿಗೆ ಸಮಸ್ಯೆ

300x250 AD

ಹಳಿಯಾಳ: ನಿಗದಿತ ಸಮಯದಲ್ಲಿ ಹಳಿಯಾಳದಿಂದ ಧಾರವಾಡಕ್ಕೆ ಸಾರಿಗೆ ಬಸ್‌ಗಳ ಸಂಚಾರವಿಲ್ಲದೇ ಸಮಸ್ಯೆಯಾಗುತ್ತಿರುವುದಾಗಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಶಾಲಾ- ಕಾಲೇಜು ವಿದ್ಯಾಭ್ಯಾಸಕ್ಕಾಗಿ ಪ್ರತಿದಿನ ಹಳಿಯಾಳದಿಂದ ಧಾರವಾಡಕ್ಕೆ ಅನೇಕ ವಿದ್ಯಾರ್ಥಿಗಳು ತೆರಳುತ್ತಿದ್ದು, ಮುಂಜಾನೆ 8ರವರೆಗೆ ಸರಿಯಾಗಿ ಬಸ್‌ಗಳ ವ್ಯವಸ್ಥೆ ಇಲ್ಲ. ತಡೆರಹಿತ ಬಸ್ ಗಳಿದ್ದರೂ ಬಸ್ ಪಾಸ್ ಇರುವ ವಿದ್ಯಾರ್ಥಿಗಳಿಗೆ ಅದರಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

300x250 AD

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಕನಿಷ್ಠ ಎರಡರಿಂದ ಮೂರು ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Share This
300x250 AD
300x250 AD
300x250 AD
Back to top