ಭಟ್ಕಳ: ವಿಶ್ವ ಹಿಂದು ಪರಿಷತ್, ಭಜರಂಗದಳ ಕರ್ನಾಟಕ ಉತ್ತರ ಪ್ರಾಂತ ಭಟ್ಕಳ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆಯು ಸೋಮವಾರದಂದು ಮುರುಡೇಶ್ವರದಿಂದ ಭಟ್ಕಳ ತನಕ ಅದ್ದೂರಿಯಾಗಿ ಜರುಗಿತು.
ಶ್ರೀ ಕ್ಷೇತ್ರ ಮುರ್ಡೇಶ್ವರಕ್ಕೆ ಪುರಪ್ರವೇಶ ಮಾಡಿದ ರಥಯಾತ್ರೆಗೆ ಭವ್ಯ ಸ್ವಾಗತ ಮಾಡಲಾಯಿತು. ನಂತರ ಮುರುಡೇಶ್ವರದ ಓಲಗ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅಲ್ಲಿಂದ ನಂತರ ಮಧ್ಯಾಹ್ನ ಮುರುಡೇಶ್ವರದಿಂದ ಶಿರಾಲಿಯ ಹಳೆಕೋಟೆ ಸಾರದಹೊಳೆ ದೇವಸ್ಥಾನದಿಂದ ಸ್ವಾಗತಿಸಿ ಅಲ್ಲಿಂದ ಮೆರವಣಿಗೆ ಮೂಲಕ ಶಿರಾಲಿ ಪೇಟೆ ಆಂಜನೇಯ ದೇವಸ್ಥಾನದ ಹತ್ತಿರ ಕಾರ್ಯಕ್ರಮವನ್ನು ನೆರವೇರಿಸಿ ಅಲ್ಲಿಂದ ಅದ್ದೂರಿ ಮೆರವಣಿಗೆಯೊಂದಿಗೆ ಭಟ್ಕಳದ ಮುಖ್ಯ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಭಜರಂಗದಳದ ಪ್ರಮುಖರು ಆಂಜನೇಯನ ಮೂರ್ತಿಗೆ ಹೂವಿನ ಹಾರ ಹಾಕಿ ಪುರ ಪ್ರವೇಶದ ನಂತರ ಸ್ವಾಗತಿಸಿಕೊಂಡರು.