Slide
Slide
Slide
previous arrow
next arrow

ನೈರ್ಮಲ್ಯ ರಕ್ಷಣೆಗಾಗಿ ಪೌರಕಾರ್ಮಿಕರಿಗೆ ಸಹಕರಿಸಿ: ದಿನಕರ ಶೆಟ್ಟಿ

300x250 AD

ಕುಮಟಾ: ಪಟ್ಟಣದ ಪುರಭವನದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಸ್ವಸ್ಥ ಪಟ್ಟಣದ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅಮೂಲ್ಯವಾದದ್ದು. ಇಡೀ ಪಟ್ಟಣದ ಸೌಂದರ್ಯವನ್ನು ರಕ್ಷಿಸುವ ಜವಾಬ್ದಾರಿಯುತ ಕಾರ್ಯವನ್ನು ನಿರ್ವಹಿಸುವ ಕಾಯಕ ಯೋಗಿಗಳೇ ಪೌರಕಾರ್ಮಿಕರು. ಪೌರಕಾರ್ಮಿಕರ ಸೇವೆ ಇಲ್ಲದಿದ್ದರೆ ಅಂತಹ ನಗರದ ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ನಮ್ಮ ನಗರದ ನೈರ್ಮಲ್ಯ ರಕ್ಷಣೆಗೆ ಪ್ರತಿಯೊಬ್ಬ ಪ್ರಜೆಗಳು ಪೌರಕಾರ್ಮಿಕರಿಗೆ ಸಹಕರಿಸುವುದು ಅತ್ಯಗತ್ಯ. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಗರದ ಸ್ವಚ್ಛತೆಗಾಗಿ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರೆಲ್ಲರಿಗೆ ಧನ್ಯವಾದಗಳು. ನಿಮಗೆ ಸರ್ಕಾರದಿಂದ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರೆಲ್ಲರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಕಿರಣ ಅಂಬಿಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಮ್.ಜಿ.ನಾಯ್ಕ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.

300x250 AD

ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಪುರಸಭಾ ಸದಸ್ಯರಾದ ಮೋಹಿನಿ ಗೌಡ, ಗೀತಾ ಮುಕ್ರಿ, ಶೈಲಾ ಗೌಡ, ಎಮ್.ಟಿ.ನಾಯ್ಕ, ಅನಿಲ್ ಹರ್ಮಲಕರ್, ಮಹೇಶ ನಾಯಕ, ಪೌರಕಾರ್ಮಿಕ ಅಣ್ಣಪ್ಪ ಸಿರ್ಸಿಕರ್ ವೇದಿಯಲ್ಲಿದ್ದರು.

Share This
300x250 AD
300x250 AD
300x250 AD
Back to top