ಹಳಿಯಾಳ: ಸಿದ್ದಿ ಬುಡಕಟ್ಟು ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಸಿದ್ದಿ ಸಮಾಜ ಫೌಂಡೇಶನ್ ಟ್ರಸ್ಟ್ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದ ಮುಖಾಂತರ ಮೆರವಣಿಗೆ ಕೈಗೊಂಡ ಮಾರುಕಟ್ಟೆ ಪ್ರದೇಶ ಹಾಗೂ ಶಿವಾಜಿ ಸರ್ಕಲ್‌ವರೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗುತ್ತಾ ಬಳಿಕ ತಹಶೀಲ್ದಾರ್ ಕಚೇರಿಯ ಬಳಿ ಸೇರಿದರು. ಶತಮಾನದಿಂದ ಉಳುಮೆ ಮಾಡಿಕೊಂಡು ಬಂದ ಸಿದ್ದಿ ಕುಟುಂಬಗಳ ಕೃಷಿ ಭೂಮಿಯನ್ನು ಮೋಸದಿಂದ ತಮ್ಮ ಹೆಸರಿಗೆ ಮಡಿಕೊಂಡಿರುವುದರಿಂದ ಮರಳಿ ಸಿದ್ದಿ ಕುಟುಂಬಗಳಿಗೆ ಒದಗಿಸಬೇಕು ಆದ್ದರಿಂದ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕಾ ಅಧ್ಯಕ್ಷ ಇಮಾಮ ಸಿದ್ಧಿ, ಪ್ರಮುಖರಾದ ರೋಕಿ ಸಿದ್ಧಿ, ಮೇರಿ ಗರಿಭಾಜೆ, ರಾಬಿಯಾ ದೇವರಾಯ, ಮಾಬುಬಿ, ಜಾಂಗಳೆ, ಪ್ರಕಾಶ ಸಿದ್ದಿ, ಅರ್ಚನಾ ಸಿದ್ದಿ ಹಾಗೂ ಸಲಿಂ ಬೆಳಗಾಂವಕರ ಮತ್ತು ಇನ್ನಿತರರು ಉಪಸ್ಥಿತರಿದ್ದರು.