• Slide
    Slide
    Slide
    previous arrow
    next arrow
  • ಪ್ರಾಥಮಿಕ, ಪ್ರೌಢ ವಿದ್ಯಾರ್ಥಿಗಳಿಗೆ ಸಮುತ್ಕರ್ಷದಿಂದ ಐಎ‍ಎಸ್ ಫ಼ೌಂಡೇಶನ್ ಕೋರ್ಸ್: ಆ.6ರಂದು ಪೂರ್ವಭಾವಿ ಪರೀಕ್ಷೆ

    300x250 AD

    ಶಿರಸಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿಯೇ ಮಕ್ಕಳಿಗೆ ದೇಶದ ಅತ್ಯುನ್ನತ ನಾಗರೀಕ ಸೇವಾ ಪರೀಕ್ಷೆಗಳಾದ IAS, IPS, IFS ನಂತಹ ಪರೀಕ್ಷೆಗಳ ಕುರಿತಾಗಿ ತಿಳುವಳಿಗೆ ಮತ್ತು ತರಬೇತಿ ನೀಡಿ ಈಗಿನಿಂದಲೇ ಅವರನ್ನು ಪರೀಕ್ಷೆಗೆ ಸಜ್ಜಾಗುವಂತೆ ಮಾಡುವ ಉದ್ದೇಶದೊಂದಿಗೆ ಕಳೆದ ಕೆಲವು ವರ್ಷಗಳಿಂದ ಹುಬ್ಬಳ್ಳಿಯ ಸಮುತ್ಕರ್ಷ ಟ್ರಸ್ಟ್ ಕಾರ್ಯನಿರತವಾಗಿದೆ.

    ಸಮುತ್ಕರ್ಷ ಟ್ರಸ್ಟ್ ನ ಸಮುತ್ಕರ್ಷ ಐಎ‍ಎಸ್ ವತಿಯಿಂದ 6,7,8, ಮತ್ತು 9 ನೇ ತರಗತಿಯ ಮಕ್ಕಳಿಗೆ ಶ್ರದ್ಧಾ – ಮೇಧಾ ಹೆಸರಿನಲ್ಲಿ ಪ್ರೀ ಐಎ‍ಎಸ್ ಫ಼ೌಂಡೇಶನ್ ಕೋರ್ಸ್ ಆರಂಭಿಸಲಾಗುತ್ತಿದ್ದು ಆಗಸ್ಟ್ 6 ರಂದು ಎಂ.ಇ.ಎಸ್. ಕಾಮರ್ಸ್ ಕಾಲೇಜಿನಲ್ಲಿ ಬೆಳಿಗ್ಗೆ 10 ಗಂಟೆಗೆ ಈ ಕುರಿತು ಪೂರ್ವಭಾವಿಯಾಗಿ ಲಿಖಿತ ಪರೀಕ್ಷೆ ಆಯೋಜಿಸಲಾಗಿದೆ.

    ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ಸೇವೆಗಳಾದ ಐಎ‍ಎಸ್, ಐಪಿಎಸ್, ಐಎಫ಼್‍ಎಸ್ ನಂತಹ ನಾಗರೀಕ ಸೇವಾ ಪರೀಕ್ಷೆಗಳ ಕುರಿತು ಈಗಿನಿಂದಲೇ ತರಬೇತಿ ನೀಡಿ ಪರೀಕ್ಷೆಯ ಎದುರಿಸಲು ಈಗಿನಿಂದಲೇ ಸಜ್ಜಾಗಲು ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ವ್ಯಕ್ತಿತ್ವ ವಿಕಸನ, ಬರವಣಿಗೆ, ಮೌಖಿಕ ಕೌಶಲ್ಯಗಳ ತರಬೇತಿಯನ್ನೂ ನೀಡಲಾಗುತ್ತದೆ.

    300x250 AD

    ಈ ಕುರಿತು ಪರೀಕ್ಷೆ ಬರೆಯಲು ಇಚ್ಚಿಸುವವರು Tel:+919663400284 ಸಂಖ್ಯೆಗೆ SMS ಕಳಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top