• Slide
    Slide
    Slide
    previous arrow
    next arrow
  • ಶಿರಸಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ: ಸಮಸ್ಯೆಗಳ ಕುರಿತು ಚರ್ಚೆ

    300x250 AD

    ಶಿರಸಿ: ಮಳೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸಮಸ್ಯೆ ಆಲಿಸಲು ಈ ಸಭೆ ಕರೆಯಲಾಗಿದೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

    ಇಲ್ಲಿನ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ಪ್ರಗರತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಾಗವಹಿಸಿ ಮಾತನಾಡಿ, ಶಿರಶಿಗೆ ಬರಲು ವಿಳಂಬವಾದರೂ ಕೂಡ ಕಾರವಾರದಲ್ಲಿಯೇ ಜಿಲ್ಲೆಯ ಎಲ್ಲಾ ತಾಲೂಕಗಳ ಬಗ್ಗೆ ಚರ್ಚಿಸಲಾಗಿದೆ. ನಮ್ಮ ಸರ್ಕಾರದಿಂದ ಸಾಮಾನ್ಯ ಜನರಿಗೆ ಬಡವರಿಗೆ ಸಹಾಯವಾಗುವ ರೀತಿ ಕೆಲಸ ಮಾಡಬೇಕು. ಯಾವುದೇ ಜನರಿಂದ ಇಲಾಖೆಯ ಬಗ್ಗೆ ದೂರು ಬರಬಾರದು, ಅಧಿಕಾರಿಗಳಿಂದ ಸೂಕ್ತ ಸಹಾಯ ಆಗಬೇಕು. ಯಾವುದೇ ರೀತಿಯ ದೂರು ಸಾರ್ವಜನಿಕರಿಂದ ಬರಬಾರದು. ಅಧಿಕಾರಿಗಳೂ ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೇಳಿದರು.

    ಪ್ರತಿ ತಾಲೂಕಿನ ತಹಸೀಲ್ದಾರ್ ಅಕೌಂಟನಲ್ಲಿ 25 ಲಕ್ಷ ರೂ. ಜಮಾ ಮಾಡಿದ್ದೇವೆ. ಜಿಲ್ಲೆಯಲ್ಲಿ ಮಳೆಹಾನಿ ಪರಿಹಾರ ನೀಡಲು ಹಣಕಾಸಿನ ಕೊರತೆ ಇಲ್ಲ. ಪ್ರತಿ ತಾಲೂಕಿನಲ್ಲಿಯೂ ಪ್ರವಾಹ ಪರಿಹಾರ ವ್ಯವಸ್ಥೆ ಸಿದ್ಧವಾಗಿಟ್ಟುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಬರುವ ವರ್ಷ ಕಾಳಜಿ ಕೇಂದ್ರ ಆರಂಭಿಸುವಂತಾಗಬಾರದು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸೂಕ್ತ ಪುನರ್ವಸತಿ ಕಲ್ಪಿಸಿ ಈ ಸಮಸ್ಯೆ ಮತ್ತೆ ಜೀವಂತ ಇರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಅರಣ್ಯ ಪ್ರದೇಶದಲ್ಲಿ ಜಿಪಿಎಸ್ ಆಗಿದ್ರೆ ಅಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುತ್ತೇವೆ. ಮನೆ ನಿರ್ಮಾಣಕ್ಕೆ 1.5 ಲಕ್ಷ ರೂ. ನೀಡಲು ಸರ್ಕಾರ ಸಿದ್ಧವಿದೆ. ಒಂದೊಮ್ಮೆ ಜಿಪಿಎಸ್ ಆದ ಜಾಗ ಇರದಿದ್ದರೆ ರೆವಿನ್ಯೂ ಭೂಮಿಯನ್ನಾದರೂ ಖರೀದಿಸಲು ಅವಕಾಶ ಮಾಡಿಕೊಡುತ್ತೇವೆ. ಸರ್ಕಾರ ಐದು ಗ್ಯಾರಂಟಿ ಕೊಟ್ಟಿದ್ದಕ್ಕೆ ಹಣ ಇಲ್ಲ ಎಂದು ಜನ ಎಂದುಕೊಳ್ಳುವುದು ಬೇಡ, ಯಾವ ಅಧಿಕಾರಿಗೂ ವೇತನ ಕಡಿತಗೊಳಿಸಿಲ್ಲ, ತುರ್ತು ಸ್ಥಿತಿಗೆ ಹಣ ಇಲ್ಲ ಎನ್ನುವುದಿಲ್ಲ. ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ತುಂಬಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

    300x250 AD

    ಶಿರಸಿ ಕುಮಟಾ ರಸ್ತೆ ನಿರ್ಮಿಸುತ್ತಿರುವ ಇಂಜಿನಿಯರ್ ಗಳು ಸಭೆಗೆ ಹಾಜರಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸೇತುವೆ, ರಸ್ತೆ ಸಮಸ್ಯೆ ಇದ್ರೂ ಇಂಜಿನಿಯರ್ ಸಭೆಗೆ ಬರಲ್ಲ ಅಂದ್ರೆ ಹೇಗೆ ? ಮಣ್ಣು ಕುಸಿಯುವಂತೆ ರಸ್ತೆ ಪಕ್ಕದ ಮಣ್ಣು ತೆಗೆದಿದ್ದರೆ ಗುತ್ತಿಗೆದಾರರೇ ಅದಕ್ಕೆ ಹೊಣೆ ಆಗ್ತಾರೆ. ಮಣ್ಣು ತೆಗೆದಾಗ ಮತ್ತೆ ಬೀಳುತ್ತದೆ ಎಂದು ಗೊತ್ತಾಗದಿದ್ರೆ ಅವರೆಂತ ಇಂಜಿನಿಯರ್ ? ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು,

    ಈ ವೇಳೆ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ, ಎಸಿ ಆರ್.ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top