• Slide
    Slide
    Slide
    previous arrow
    next arrow
  • ಸಂಭ್ರಮ ಸಡಗರದಿಂದ ನಡೆದ ಹೊನ್ನೆಬೈಲ್ ಗ್ರಾಮ ದೇವರ ಬಂಡಿಹಬ್ಬ

    300x250 AD

    ಅಂಕೋಲಾ: ತಾಲೂಕಿನ ಹೊನ್ನೆಬೈಲ್ ಗ್ರಾಮದೇವರಾದ ಶ್ರೀ ಬೊಮ್ಮಯ್ಯ, ಮಾಣಿಬೀರ, ಕುಸ್ಲೆದೇವರ ಬಂಡಿಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಕಳಸ ದೇವಸ್ಥಾನದಿಂದ ಸಿದ್ಧಗೊಂಡ ಮೂರು ದೇವರುಗಳ ಕಳಸವು ಶ್ರೀ ಬೊಮ್ಮಯ್ಯ ದೇವಸ್ಥಾನಕ್ಕೆ ತೆರಳಿ ನಂತರ ಕುಸ್ಲೆ ದೇವಸ್ಥಾನಕ್ಕೆ ಆಗಮಿಸುತ್ತದೆ.

    ಪೂಜಾ ಕಾರ್ಯದ ನಂತರ ದೇವರ ಕಳಸವು ತನ್ನ ಮೂಲಸ್ಥಾನಕ್ಕೆ ತೆರಳುತ್ತದೆ. ಭಕ್ತರು ಪ್ರತಿವರ್ಷದಂತೆ ಹರಕೆಯ ರೂಪದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ಆಕಸ್ಮಿಕವಾಗಿ ಉಂಟಾಗಿದ್ದ ಬಾರಿ ಗಾಳಿಯಿಂದಾಗಿ ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬ ಮುರಿದುಬಿದ್ದಿದ್ದು, ಇದರಿಂದ ವಿದ್ಯುತ್ ವ್ಯತ್ಯಯವಾಯಿತು. ಹಬ್ಬಕ್ಕೆಂದು ಬಂದ ಮನೆಯವರು ವಿದ್ಯುತ್ ಸಮಸ್ಯೆ ಅನುಭವಿಸಬೇಕಾಯಿತು.
    ಈ ಸಂದರ್ಭದಲ್ಲಿ ಹೊನ್ನೆಬೈಲ್ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಅರ್ಚಕರಾದ ಗುಣವಂತ ಗುನಗ, ವಿಠ್ಠಲ ಗುನಗ, ಗಣಪತಿ ಗುನಗ ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top