• Slide
  Slide
  Slide
  previous arrow
  next arrow
 • ವೀರಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ ಸಂಪನ್ನ

  300x250 AD

  ದಾಂಡೇಲಿ: ನಗರದ ಪಟೇಲ್ ನಗರದ ನಗರಸಭೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿರುವ ಶ್ರೀವೀರಾಂಜನೇಯ ದೇವಸ್ಥಾನದ 14ನೇ ವರ್ಷದ ವಾರ್ಷಿಕೋತ್ಸವವು ಶುಕ್ರವಾರ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.

  ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಶ್ರೀಗಣಪತಿ ಪೂಜೆ, ಪುಣ್ಯಾಹವಾಚನ, ಆಚಾರ್ಯವರಣ, ನವಗ್ರಹ ಹವನ, ಪೂರ್ಣಾಹುತಿ, ಮಹಾಪೂಜೆ, ಮತ್ತು ಮಹಾ ಮಂಗಳಾರತಿ ನಡೆದು, ತದನಂತರ ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

  300x250 AD

  ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್ ಅವರ ಮಾರ್ಗದರ್ಶನದಲ್ಲಿ ನಗರಸಭೆಯ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಾರ್ಷಿಕೋತ್ಸವದ ಯಶಸ್ಸಿಗೆ ಶ್ರಮಿಸಿದ್ದರು. ಸ್ಥಳೀಯ ಭಕ್ತಾಭಿಮಾನಿಗಳ ಸಹಕಾರದಲ್ಲಿ ಶ್ರೀವೀರಾಂಜನೇಯ ಸೇವಾ ಸಮಿತಿಯ ನೇತೃತ್ವದಲ್ಲಿ ವಾರ್ಷಿಕೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

  Share This
  300x250 AD
  300x250 AD
  300x250 AD
  Leaderboard Ad
  Back to top