• Slide
    Slide
    Slide
    previous arrow
    next arrow
  • ಮೇ. 14ಕ್ಕೆ ಪರ್ತಗಾಳಿ ಮಠಾಧೀಶರ ಪುರ ಪ್ರವೇಶ

    300x250 AD

    ಮಂಗಳೂರು: ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮೇ. 14ರಂದು ಸಂಜೆ 5.30 ಗಂಟೆಗೆ ತಮ್ಮ ಮೂಲ್ಕಿ ಮೊಕ್ಕಂನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ.

    ಪುರಪ್ರವೇಶ ಮೆರವಣಿಗೆಯು ವಿ.ಟಿ.ರಸ್ತೆಯ ಚೇತನ ಶಾಲೆಯಿಂದ ಸಂಜೆ 6.00 ಗಂಟೆಗೆ ಆರಂಭವಾಗಿ 7.30ಕ್ಕೆ ಗೋಕರ್ಣ ಮಠ, ಕಾರ್ ಸ್ಟ್ರೀಟ್ ತಲುಪಲಿದೆ. ಸಂಸ್ಥಾನದ ಮಠಾಧಿಪತಿಯಾದ ನಂತರ ಸ್ವಾಮೀಜಿಯವರು ಪ್ರಥಮ ಬಾರಿಗೆ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ತಮ್ಮ ಸ್ವಮಠಕ್ಕೆ ಭೇಟಿ ನೀಡುತ್ತಿದ್ದಾರೆ.
    2023ರ ಮೇ 14ರಿಂದ 21ರವರೆಗೆ ಸ್ವಾಮೀಜಿಯವರ ಮೊಕ್ಕಾಂನಲ್ಲಿ ಹಲವಾರು ಧಾರ್ಮಿಕ ಆಚರಣೆಗಳು, ಹವನಗಳು, ಮುದ್ರಾಧಾರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top