ಶಿರಸಿ: ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಪಂ.ದೀನದಯಾಳ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಭೆ ನಡೆಸಲಾಯಿತು. ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಭಾಧ್ಯಕ್ಷರು ಸಭೆಗೆ ತಿಳಿಸಿದರು. ಜನಸಂಘದಿಂದ ಬಿಜೆಪಿಯ ಬೆಳವಣಿಗೆ ಕುರಿತು ಸಭೆಗೆ ಆಗಮಿಸಿದ್ದ ಮಹಿಳೆಯರಿಗೆ ತಿಳಿಸಲಾಯಿತು. ಶ್ಯಾಮ ಪ್ರಸಾದ ಮುಖರ್ಜಿ ಮತ್ತು ಪಂ.ದೀನ ದಯಾಳ ಉಪಾಧ್ಯಾಯರ ಬಲಿದಾನವನ್ನು ಸ್ಮರಿಸಲಾಯಿತು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ಪಕ್ಷದ ಪಧಾಧಿಕಾರಿಗಳು ನಗರ ಸಭೆ ಸದಸ್ಯರು, ಹೊಸ ಕಾರ್ಯಕರ್ತರು ಭಾಗವಹಿಸಿದ್ದರು.
ಶಿರಸಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಭೆ: ಸ್ಪೀಕರ್ ಕಾಗೇರಿ ಭಾಗಿ
