Slide
Slide
Slide
previous arrow
next arrow

ರಾಷ್ಟ್ರ ಸೇವಿಕಾ ಸಮಿತಿಯಿಂದ ಪ್ರಬುದ್ಧ ಮಹಿಳೆಯರ ಗೋಷ್ಠಿ: ಪ್ರಮುಖ ಸಂಚಾಲಿಕಾ ಮಾ. ಶಾಂತಕ್ಕಾಜಿ ಉಪಸ್ಥಿತಿ

300x250 AD

ಕುಮಟಾ: ಉತ್ತರಕನ್ನಡ ಜಿಲ್ಲೆ ವಿಜಯನಗರ ಪ್ರಾಂತದ ರಾಷ್ಟ್ರ ಸೇವಿಕಾ ಸಮಿತಿಯಿಂದ ತಾಲೂಕಿನ ಹೆರವಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ವಂ.ಪ್ರಮುಖ ಸಂಚಾಲಿಕಾ ಮಾ. ಶಾಂತಕ್ಕಾಜಿ ಉಪಸ್ಥಿತಿಯಲ್ಲಿ ಗಣವೇಷ ಸಹಿತ ಶಾಖೆ ಮತ್ತು ಪ್ರಬುದ್ಧ ಮಹಿಳೆಯರ ಗೋಷ್ಠಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾ. ಶಾಂತಕ್ಕಾಜಿ ಮಾತನಾಡಿ, ಮಹಿಳೆಯರು ಯಾವ ರೀತಿಯಲ್ಲಿ ತಮ್ಮನ್ನು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ದೇಶಭಕ್ತಿಯನ್ನು ಹೇಗೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅದರಿಂದ ಸಮಾಜಕ್ಕಾಗುವ ಉಪಯೋಗ, ಭ್ರಷ್ಟಾಚಾರವನ್ನು ಹೇಗೆ ಹೊಡೆದೋಡಿಸಬಹುದು, ಅದೇ ರೀತಿ ತಮ್ಮ ಮಕ್ಕಳಲ್ಲಿ ಹೇಗೆ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಿ, ನೈತಿಕ ಹೊಣೆಗಾರಿಕೆಯುಳ್ಳ ಒಬ್ಬ ಪ್ರಜೆಯನ್ನು ಸಮಾಜಕ್ಕೆ ಕೊಡಬಹುದು ಎಂದು ವಿವರಿಸಿದರು.
ಹಾಗೆಯೇ ಮುಖ್ಯವಾಗಿ ಸಂಕಲ್ಪಯುತ ತಾಯ್ತನದ ಬಗ್ಗೆ ಸವಿಸ್ತಾರವಾಗಿ, ಇತಿಹಾಸದ ಉದಾಹರಣೆಗಳ ಸಹಿತ ಹೇಳಿದರು. ಹಿಂದೆ ಜೀಜಾಬಾಯಿಯು ಹೇಗೆ ಒಬ್ಬ ದೇಶಭಕ್ತ ಮಗನನ್ನು ತನ್ನ ಧೃಢ ಸಂಕಲ್ಪದೊಂದಿಗೆ ಪಡೆದಳು ಎಂದು ತಿಳಿಸುತ್ತಾ, ಹಾಗೆಯೇ, ಬಾಲಗಂಗಾಧರ ತಿಲಕರ ತಾಯಿ ಪಾರ್ವತಿ ಬಾಯಿಯು, ದೇಶಕ್ಕೋಸ್ಕರ ಹೊರಾಡಿ, ತಾಯಿ ಭಾರತಿಯನ್ನು ಪರಕೀಯರಿಂದ ಮುಕ್ತಗೊಳಿಸುವಂತ ಹಾಗು ನಿರಂತರ ದೇಶಸೇವೆಯನ್ನು ಮಾಡುವ ಮಗ ಬೇಕೆಂದು ಸಂಕಲ್ಪ ತೊಟ್ಟು, 21 ದಿನಗಳ ನಿರ್ಜಲ ಉಪವಾಸವನ್ನು ಮಾಡಿ ಮಗನನ್ನು ಪಡೆದಿದ್ದಳು. ಹೀಗೆ ಹಲವಾರು ಉದಾಹರಣೆಗಳನ್ನು ನೀಡಿ, ತಾಯಂದಿರು ಸಮಾಜಕ್ಕೆ ಶಕ್ತಿಯಿದ್ದಂತೆ, ಸುತ್ತಲಿನವರಲ್ಲಿ ಹೇಗೆ ರಾಷ್ಟ್ರಭಕ್ತಿ ಬೆಳೆಸಬೇಕು, ಹೇಗೆ ರಾಷ್ಟ್ರಕಾರ್ಯಗಳಲ್ಲಿ ಭಾಗವಹಿಸಬೇಕು, ಶಾಖೆ ಎನ್ನುವಂತದ್ದು ಹೇಗೆ ಸಂಸ್ಕಾರ ಕೇಂದ್ರಗಳಾಗಿ ಕೆಲಸ ನಿರ್ವಹಿಸುತ್ತದೆ ಎನ್ನುವುದನ್ನು ಹೇಳಿದರು. ಇಂದಿನ ಹೆಣ್ಣುಮಕ್ಕಳೂ ಕೂಡ ದೇಶಭಕ್ತಿಯನ್ನು ಬೆಳೆಸಿಕೊಂಡು, ಅಪರಿಮಿತ ದೇಶಭಕ್ತಿಯ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸಿ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ತಾಯಂದಿರಿಂದ ಆಗಬೇಕು ಎಂದರು.

ಶಿರಸಿಯಲ್ಲಿ:

300x250 AD

ಶಿರಸಿಯಲ್ಲೂ ಕೂಡ ಮಾ.ಶಾಂತಕ್ಕಾಜಿ ಉಪಸ್ಥಿತಿಯಲ್ಲಿ ಗಣವೇಶ ಸಹಿತ ಶಾಖೆ, ಸಂಘ ಬಂಧುಗಳ ಭೇಟಿ ಹಾಗೂ ಕಾರ್ಯಕರ್ತರ ಬೈಠಕ್‌ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಕ್ತಿ ಸ್ವರೂಪಿಣಿಯಾದ ಸ್ತ್ರೀ ಹೇಗೆ ದೇಶಕ್ಕೆ ಆಧಾರವಾಗಬಲ್ಲಳು. ತೇಜಸ್ವೀ ಹಿಂದೂ ರಾಷ್ಟ್ರದ ‌ನಿರ್ಮಾಣದಲ್ಲಿ ಸ್ತ್ರೀಯರ ಪಾತ್ರಗಳ ಬಗ್ಗೆ‌ ವಿವರಿಸಿದರು.

ಈ ಎರಡೂ ಸ್ಥಳಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯಿಂದ ಗಣವೇಷ ಸಹಿತ ನಿಯುದ್ಧ, ಯೋಗ ವ್ಯಾಯಾಮಾದಿಗಳ ಪ್ರದರ್ಶನವು ನಡೆಯಿತು. ಕಾರ್ಯಕ್ರಮದಲ್ಲಿ ಉತ್ತರ‌ಕನ್ನಡ ಜಿಲ್ಲಾ ಕಾರ್ಯವಾಹಿಕ ಡಾ. ಶ್ರೀದೇವಿ ಭಟ್ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top