ದಾಂಡೇಲಿ: ನಗರದ ಟೌನಶಿಪ್’ನಲ್ಲಿ ಅನಾರೋಗ್ಯಗೊಂಡು ಒದ್ದಾಡುತ್ತಿರುವ ಗೋವೊಂದರ ಜೀವ ರಕ್ಷಣೆಗಾಗಿ ನಗರದ ಪಶುವೈದ್ಯ ಆಸ್ಪತ್ರೆಯ ವೈದ್ಯೆ ಡಾ.ಅರ್ಚನಾ ಅವರು ತಮ್ಮನ್ನು ತಾವು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.
ಟೌನಶಿಪ್’ನಲ್ಲಿ ಬಿಡಾಡಿ ಗೋಮಾತೆಯೊಂದು ಅನಾರೋಗ್ಯಗೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ್ದ ಸ್ಥಳೀಯ ಗೋಪ್ರೇಮಿ ಜೈರಾಮ್ ಪ್ರಭು ಅವರು ಅದನ್ನು ತನ್ನ ಮನೆಯ ಆವರಣದಲ್ಲಿಟ್ಟು ಆರೈಕೆ ಮಾಡುತ್ತಿದ್ದಾರೆ. ಇತ್ತ ಇದರ ಚಿಕಿತ್ಸೆಗೆ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದ ಡಾ.ಅರ್ಚನಾ ಸಿನ್ಹಾ ಅವರು ಕೆಲಸದ ಒತ್ತಡದ ನಡುವೆಯು ಸ್ಥಳಕ್ಕೆ ಭೇಟಿ ಅನಾರೋಗ್ಯ ಪೀಡಿತ ಬಿಡಾಡಿ ಆಕಳಿನ ಆರೋಗ್ಯವನ್ನು ಪರೀಕ್ಷಿಸಿ, ಅಗತ್ಯ ಚಿಕಿತ್ಸೆಯನ್ನು ನೀಡಿ ರಕ್ಷಣೆಗೆ ಮುಂದಾಗುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಾ.ಅರ್ಚನಾ ಸಿನ್ಹಾ ಅವರು ಒಬ್ಬ ಮಹಿಳಾ ವೈದ್ಯೆಯಾಗಿದ್ದರೂ, ಸ್ವತಃ ಆಕಳಿದ್ದ ಸ್ಥಳಕ್ಕೆ ಭೇಟಿ ನೀಡಿ, ಚಿಕಿತ್ಸೆ ನೀಡುವುದರ ಮೂಲಕ ಸಾಮಾಜಿಕ ಕಾಳಜಿಯನ್ನು ಮೆರೆದಿದ್ದಾರೆ.
ಬಿಡಾಡಿ ಆಕಳಿನ ರಕ್ಷಣೆಗೆ ನಿಂತ ಡಾ.ಅರ್ಚನಾ ಸಿನ್ಹಾ
