• Slide
    Slide
    Slide
    previous arrow
    next arrow
  • ನ.6 ಕ್ಕೆ‌ ಕಲಿಕಾ ಕಮ್ಮಟ ಮತ್ತು ಕವಿಗೋಷ್ಟಿ

    300x250 AD

    ಶಿರಸಿ :ನಗರದ ಸಾಮ್ರಾಟ್ ಎದುರಿನ ನೆಮ್ಮದಿ ಕುಟೀರದಲ್ಲಿ ನ 6 ರಂದು, ರವಿವಾರ, ಮುಂಜಾನೆ 9.30 ಘಂಟೆಗೆ, ‌ಸಾಹಿತ್ಯ ಚಿಂತಕರ ಚಾವಡಿ,ಶಿರಸಿ ಇವರ ಆಶ್ರಯದಲ್ಲಿ ‘ಕಲಿಕಾ ಕಮ್ಮಟ ಮತ್ತು ಕವಿಗೋಷ್ಟಿ ಹಾಗೂ ಕಥಾವಾಚನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ

    ಕಾರ್ಯಕ್ರಮವನ್ನು ಕದಂಬ ನ್ಯೂಸ್’ನ ರವೀಶ ಹೆಗಡೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ದಿವಸ್ಪತಿ ಭಟ್ ಉಪಸ್ಥಿತರಿರುವರು. ಸಭಾಧ್ಯಕ್ಷತೆಯನ್ನು ಚಿಂತನ ಚಾವಡಿಯ ಎಸ್.ಎಸ್.ಭಟ್ ವಹಿಸಲಿದ್ದು,

    ಸಂಪನ್ಮೂಲ ವ್ಯಕ್ತಿಗಳಾಗಿ, ಚುಟುಕು ಕವಿ ದತ್ತಗುರು ಕಂಠಿ, ಕಥೆಗಾರ ಕೆ.ಮಹೇಶ, ಕವಯಿತ್ರಿ ರೇವತಿ ಭಟ್, ಹಿರಿಯ ಸಾಹಿತಿ ಡಿ.ಎಸ್.ಭಟ್, ರಾಜು ನಾಯ್ಕ ಮತ್ತು ಎಸ್.ಎಮ್.ಹೆಗಡೆ ಭಾಗವಹಿಸಲಿದ್ದಾರೆ .
    ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಹಾಡುಗಾರ್ತಿ ತುಂಗಾ ಭಟ್ ಮತ್ತು ಕವಯಿತ್ರಿ ಶೋಭಾ ಭಟ್ ಇವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ವಿಜಯಾ ಶಾನಭಾಗ, ಭವ್ಯಾ ಹೊಳೆಯೂರು ಮತ್ತು ಯಶಸ್ವಿನಿಮೂರ್ತಿ ಇವರುಗಳು ಕಾರ್ಯಕ್ರಮ ನಿರ್ವಹಿಸಲಿದ್ದಾರೆ .

    300x250 AD

    ಕವಿಗೋಷ್ಟಿಯಲ್ಲಿ ‌ಕವಿತಾವಾಚನ ಮಾಡುವವರು ಭವ್ಯಾ ಹೊಳೆಯೂರು – 8660837679 ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು, ಎಂದು ಸಂಘಟಕರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top