ಯಲ್ಲಾಪುರ: ಪಟ್ಟಣದ ಪಶು ಆಸ್ಪತ್ರೆಯ ಎದುರಿನಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ.
ಗುರುಪ್ರಸಾದ ನಾರಾಯಣ ಸಿದ್ದಿ,ಈಶ್ವರ ಸಿದ್ಧಿ, ರವಿ ಸಿದ್ಧಿಯನ್ನು ಮೂವರು ಒಂದೇ ಬೈಕ್’ನಲ್ಲಿ ಹೋಗುತ್ತಿದ್ದು,ಪಟ್ಟಣದ ಪಶು ಆಸ್ಪತ್ರೆಯ ಎದುರಿನ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಟಾಟಾ ಏಸಿ ಗೂಡ್ಸ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರ ಪರಿಣಾಮ ಗುರುಪ್ರಸಾದನ ತಲೆಗೆ ಗಂಭೀರವಾಗಿ ಗಾಯಗಳಾಗಿವೆ. ಈ ಕುರಿತಾಗಿ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ: ಗಂಭೀರ ಗಾಯ
