ಕುಮಟಾ: ಕರಾವಳಿ ಹಿಂದೂ ಮುಕ್ರಿ ವಿವಿದ್ದೋದ್ದೇಶ ಸೇವಾ ಸಂಘದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಸಾಂಸ್ಕೃತಿಕ, ಕ್ರೀಡಾ ಹಾಗೂ ಸನ್ಮಾನ ಕಾರ್ಯಕ್ರಮ ತಾಲೂಕಿನ ಹಂದಿಗೋಣ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಹಿಂದುಳಿದ ಸಮಾಜವು ಅಭಿವೃದ್ಧಿಯಾಗಲು ಕೇವಲ ಅಭಿವೃದ್ಧಿ ಕಾರ್ಯಗಳಿಂದ ಸಾಧ್ಯವಿಲ್ಲ.ಬದಲಾಗಿ ಉತ್ತಮ ಶಿಕ್ಷಣದಿಂದ, ವಿದ್ಯಾವಂತ ಯುವಕ ಯುವತಿಯರಿಂದಲೂ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ.ತಮಗೆ ತಿಳಿದಿರುವ ಶಿಕ್ಷಣ ಜ್ಞಾನದ ಮೂಲಕ ಸುತ್ತಮುತ್ತಲಿನ ಸಮಸ್ಯೆ, ಹಾಗೂ ಜನರಿಗೆ ಸ್ಪಂದಿಸುವ ಮನೋಭಾವ ಹೊಂದಿದಾಗ ಎಲ್ಲವೂ ಸಾಧ್ಯ.ಈ ನಿಟ್ಟಿನಲ್ಲಿ ಹಿಂದುಳಿದ ಮುಕ್ರಿ ಸಮಾಜದ ಯುವಕ ಯುವತಿಯರು, ಹೆಚ್ಚಿನ ಪದವಿ ಪಡೆದು ಸನ್ಮಾನಕ್ಕೆ ಅರ್ಹರಾಗಿದ್ದಾರೆ.ಅವರನ್ನು ನಾನು ಅಭಿನಂದಿಸುತ್ತೇನೆ.ಜೊತೆಗೆ ನಿಮಗೆ ಬೇಕಾಗುವ ಸಹಕಾರ ನೀಡಲು ಸದಾ ಸಿದ್ದನಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ಪಡೆದ ಹಂದಿಗೋಣ ಮೂಲದ, ಶಿರಸಿ ಮಾರಿಕಾಂಬಾ ಶಾಲೆಯ ಶಿಕ್ಷಕರಾದ ನಾರಾಯಣ ಭಾಗ್ವತ್, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಕಿರಣ ಮುಕ್ರಿ ವೆಂಕಟೇಶ ಮುಕ್ರಿ, ಚೈತ್ರ ಮುಕ್ರಿ , ಸಂಘದ ಮಾಜಿ ಅಧ್ಯಕ್ಷರಾದ ತಿಮ್ಮು ಮುಕ್ರಿ ಅವರನ್ನು ಶಾಸಕ ದಿನಕರ ಶೆಟ್ಟಿ ಗೌರವಿಸಿ ಅಭಿನಂದಿಸಿದರು.
ಸಂಘದ ವತಿಯಿಂದ ಶಾಸಕ ದಿನಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕರಾವಳಿ ಹಿಂದೂ ಮುಕ್ರಿ ಸಮಾಜದ ಅಧ್ಯಕ್ಷ ಪಿ.ಜಿ.ಮುಕ್ರಿ, ನಿವೃತ್ತ ಪೋಲಿಸ್ ಅಧಿಕಾರಿ ಎನ್.ಆರ್.ಮುಕ್ರಿ, ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಕುಬಾಲ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಗ್ರಾ.ಪಂ ಸದಸ್ಯರು, ಹಾಗೂ ಸಂಘದ ಪದಾಧಿಕಾರಿಗಳು ಊರ ಗ್ರಾಮಸ್ಥರು ಹಾಜರಿದ್ದರು.