ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನ.6ರಂದು ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಯು-14, ಯು-16, ಯು-18 ಮತ್ತು ಯು- 20 ಬಾಲಕ- ಬಾಲಕಿಯರು ಭಾಗವಹಿಸಲು ಅವಕಾಶವಿರುತ್ತದೆ. ಈ ಕ್ರೀಡಾಕೂಟವನ್ನುರಾಷ್ಟೀಯ ಅಂತರ ಜಿಲ್ಲಾ ಕಿರಿಯರ ಕ್ರೀಡಾಕೂಟ 2022ರ ಆಯ್ಕೆಯನ್ನಾಗಿ ಪರಿಗಣಿಸಲಾಗುವುದು. ಅಲ್ಲದೇ ರಾಜ್ಯ ಅಂತರ ಜಿಲ್ಲಾ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆಯೆಂದು ಸಹ ಪರಿಗಣಿಸಲಾಗುವುದು. ಜಿಲ್ಲೆಯ ಆಸಕ್ತ ಕ್ರೀಡಾ ಪಟುಗಳು ಹೆಚ್ಚಿನ ಮಾಹಿತಿಗಾಗಿ ಕೆ.ಆರ್.ನಾಯಕ ಬೇಲೇಕೇರಿ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (ರಿ) ಮೊ.ನಂ.:98458 46351ಅವರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ನ.6 ಕ್ಕೆ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ
