Slide
Slide
Slide
previous arrow
next arrow

ಸಂಗೀತ ಕಲಿಕೆಯಿಂದ ಏಕಾಗ್ರತೆ, ಮನಃಶಾಂತಿ ಹೆಚ್ಚಳ : ಮುಳಖಂಡ

300x250 AD

ಶಿರಸಿ : ಸಂಗೀತದಿಂದ ಮನಃ ಶಾಂತಿ ದೊರೆಯುತ್ತದೆ. ಸಂಗೀತಕ್ಕೆ ಅನೇಕ ರೋಗಗಳನ್ನು ವಾಸಿಗೊಳಿಸುವ ಗುಣವಿದೆ. ವಿದ್ಯಾರ್ಥಿಗಳು ಸಂಗೀತವನ್ನು ತಮ್ಮ ಪಠ್ಯಕ್ರಮ ಜೊತೆಗೆ ಅಭ್ಯಸಿಸಿದಲ್ಲಿ, ತಮ್ಮ ಕಲಿಕೆಯಲ್ಲಿ ಧ್ಯಾನವನ್ನು ವಹಿಸಲು ಸಹಕಾರಿ. ಹಾಗಾಗಿ ನಮ್ಮ ಮಹಾವಿದ್ಯಾಲಯದ ಗಣಿತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಗೀತ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಿದ್ದೇವೆ. ಎಂದು ಎಂಇಎಸ್ ನ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಹೇಳಿದರು.
ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ವಿಭಾಗ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಹಿಂದುಸ್ತಾನಿ ಸಂಗೀತ ವಾದ್ಯಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಕಲಿಕೆಗೆ ಯಾವುದೇ ಧರ್ಮ ಜಾತಿ ಲಿಂಗದ ವಿಧವಿಲ್ಲ. ಪ್ರತಿಯೊಬ್ಬ ಆಸಕ್ತರು ಇದನ್ನ ಕಲಿಯಬಹುದಾಗಿದೆ. ಸಂಗೀತದ ಅಭ್ಯಾಸವು ಸುಲಭವಾದುದಲ್ಲ. ತಾಳ್ಮೆ, ನಿರಂತರ ಅಭ್ಯಾಸ, ಪರಿಶ್ರಮ ದಿಂದ ಸಂಗೀತ ಒಲಿಯಲಿಕ್ಕೆ ಸಾಧ್ಯ. ಸಂಗೀತ ವಿದ್ಯಾರ್ಥಿಗಳಾದ ತಾವೆಲ್ಲರೂ ಆ ಪರಿಶ್ರಮದೊಂದಿಗೆ ಸಾಧನೆಯನ್ನ ಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮಾತನಾಡಿ ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ. ಇಂದು ಯುವಕರು ಪಾಶ್ಚಿಮಾತ ಸಂಗೀತದೆಡೆಗೆ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ನಮ್ಮ ಭಾರತೀಯ ಸಂಗೀತ ಶೈಲಿಗಳಾದ ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತ ಮನಸ್ಸಿಗೆ ಮುದ ನೀಡುವಂತಹದ್ದಾಗಿದೆ. ಪಾಶ್ಚಿಮಾತ್ಯ ಸಂಗೀತ ಮನಸ್ಸನ್ನು ಕೆರಳಿಸುತ್ತದೆ ಹಾಗಾಗಿ ವೈಜ್ಞಾನಿಕವಾಗಿ ಸಿದ್ಧಾಂತವನ್ನು ಒಳಗೊಂಡ ನಮ್ಮದೇ ಸಂಗೀತ ಶೈಲಿಯನ್ನು ನಾವೆಲ್ಲರೂ ಕೇಳೋಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಜು ಪೋತದಾರ್, ಪಂಡಿತ್ ಆರ್.ವಿ. ಹೆಗಡೆ ಹಳ್ಳದಕೈ, ಗೋಪಾಲಕೃಷ್ಣ ಹೆಗಡೆ ಕಲಭಾಗ, ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು ಉಪಸ್ಥಿತರಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ನಾಗರಾಜ ಹೆಗಡೆ ಸ್ವಾಗತಿಸಿದರು. ಸಂಗೀತ ವಿಭಾಗ ಮುಖ್ಯಸ್ಥ ಡಾ ಕೆ ಜಿ ಭಟ್ ವಂದಿಸಿದರು. ವಿದುಷಿ ಸೀಮಾ ಭಾಗವತ್ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top