ಶಿರಸಿ : ವಿದ್ಯಾರ್ಥಿಗಳು ದೇಶದ ಭವಿಷ್ಯ. ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಮಹತ್ವವಾದ ಜವಾಬ್ದಾರಿ ಯುವಕರ ಮೇಲಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು.
ಅವರು ತಾಲೂಕಿನ ಸಂಪಖಂಡ ಶ್ರೀ ಗಜಾನನ ಪ್ರೌಢಶಾಲೆ 100 ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಪಠ್ಯ ಪುಸ್ತಕ, ಕ್ರೀಡಾ ಸಾಮಗ್ರಿ, ಶಿಕ್ಷಕರಿಗೆ ಆಫೀಸ್ ಫೈಲ್ ಹಾಗೂ ಹೊಸದಾಗಿ ರೂಪಗೊಳ್ಳುವ ಸೋಲಾರ್ ಸಿಸ್ಟಂಗಾಗಿ ತಮ್ಮ ಟ್ರಸ್ಟ್ ವತಿಯಿಂದ 25, 000 ರೂಪಾಯಿ ದೇಣಿಗೆ ನೀಡಿ ನಂತರ ಮಾತನಾಡಿದ ಅವರು ದೇಹವು ದೇವಾಲಯ, ಅದನ್ನು ಪೂಜಿಸಿ, ದುಶ್ಚಟಗಳಿಂದ ದೂರವಿರಿ. ಅಧುನಿಕ ಸೌಲಭ್ಯಗಳನ್ನು ಜೀವನದ ಅನುಕೂಲತೆಗಳ ಸಲುವಾಗಿ ಮಾತ್ರ ಬಳಸಿಕೊಳ್ಳಿ. ಶಿಕ್ಷಕರು ಹೇಳಿದ ಪಾಠ ಪರಿಪೂರ್ಣವಾಗಿ ಕಲಿತರೆ ಮಾತ್ರ ಯಶಸ್ವಿಯಾಗುತ್ತಿರಿ. ತಂದೆ-ತಾಯಿ ಕಂಡ ಕನಸು ನೆನಸು ಮಾಡಲು ಸಾಧ್ಯವಿದೆ. ಪರೀಕ್ಷೆಯಲ್ಲಿ ನಕಲು ಮಾಡಿ ಪಾಸಾದರೆ ಜೀವನದಲ್ಲಿ ಕಷ್ಟ ಅನುಭವಿಸುವರು ನೀವೇ, ಹೊರತು ಶಿಕ್ಷಕರಲ್ಲ, ವಿದ್ಯಾರ್ಥಿಗಳ ಜೀವನ ಹೇಗೆ ಅಂದ್ರೆ ಮುಳ್ಳಿನ ಹಾದಿ ಹಾಗೆ, ನಾವು ಯಾವ ರೀತಿಯಲ್ಲಿ ನಡೆದುಕೊಂಡು ಮುಂದೆ ಸಾಗುತ್ತೇವೆ ಹಾಗೆ ಮುಳ್ಳಿನ ಹಾದಿ ಬಯಲು ಆಗುತ್ತಾ ಹೋಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾll ದಿನೇಶ್ ಹೆಗಡೆ, ನಿವೃತ್ತ ಮುಖ್ಯೋಪಾಧ್ಯಾ ಜಿ ಎನ್ ಹೆಗಡೆ, ಸಮಿತಿಯ ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು