ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತ ಸಂಪನ್ನ ಸಭಾಭವನದಲ್ಲಿ ಜು.9, ಬುಧವಾರದಂದು ಬೆಳಗ್ಗೆ 10 ಗಂಟೆಗೆ ವೃಕ್ಷ ಲಕ್ಷ ಆಂದೋಲನ ಕರ್ನಾಟಕ ಬೆಟ್ಟ ಜಾಗೃತಿ ಅಭಿಯಾನದ ಕಾರ್ಯಕ್ರಮ ನಡೆಯಲಿದೆ.
ಸಂಘದ ಅಧ್ಯಕ್ಷರಾದ ನಾರಾಯಣ ಬಿ. ಹೆಗಡೆ ಮತ್ತೀಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೃಕ್ಷ ಲಕ್ಷ ಆಂದೋಲನ ಅಭಿಯಾನದ ತಜ್ಞ ಪ್ರಮುಖರಾದ ಅನಂತ ಹೆಗಡೆ ಅಶೀಸರ, ಡಾ.ಕೇಶವ, ವಿಶ್ವೇಶ್ವರ ಭಟ್ ಕೋಟೆಮನೆ, ನಾರಾಯಣ ಹೆಗಡೆ ಗಡಿಕೈ, ಗಣಪತಿ.ಕೆ., ಮತ್ತು ನರೇಂದ್ರ ಹೆಗಡೆ ಹೊಂಡಗಾಶಿ,ಮುಂತಾದವರು ಆಗಮಿಸಿ, ರೈತರು,ತೋಟಗಾರರು ಬೆಟ್ಟ ಬಳಕೆದಾರರು, ಎಲ್ಲರ ಜತೆಗೆ ಸಮಾಲೋಚನೆ, ಚರ್ಚೆ ನಡೆಸಲಿದ್ದಾರೆ. ಆದ್ದರಿಂದ ಎಲ್ಲಾ ರೈತ ಭಾಂದವರು,ಬೆಟ್ಟ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ತಮ್ಮ ಅತ್ಯಮೂಲ್ಯ ಅವಶ್ಯ ಸಲಹೆ ಸೂಚನೆ ನೀಡಿ, ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.