ಶಿರಸಿ: ತಾಲೂಕಿನ ಹುಲೇಕಲ್ ಗ್ರಾಮದ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ವಿಶ್ವ ಗ್ರಾಮೀಣಾಭಿವೃದ್ಧಿ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ಕೊಡುವುದರ ಮೂಲಕ ಇಕೋ ಕೇರ್ (ರಿ.) ಸಂಸ್ಥೆ, ಶಿರಸಿ ಇವರಿಂದ ಆಚರಿಸಲಾಯಿತು.
ಹುಲೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಸಂಘದ ಮತ್ತು ಸಂಜೀವಿನಿ ಒಕ್ಕೂಟದ ಮಹಿಳೆಯರು ಭಾಗವಹಿಸಿದ್ದರು.
ಗ್ರಾಮೀಣಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಸುಸ್ಥಿರ ಜೀವನೋಪಾಯ ಚಟುವಟಿಕೆಗಳು ಮತ್ತು ಪರಿಸರ ಪೂರಕ ಚಟುವಟಿಕೆಗಳ ಉದ್ಯಮಗಳ ಅನುಷ್ಠಾನದ ಕುರಿತು ಪುಂಡಲೀಕ್ ಶಿರಸಿಕರ, ಉಪಾಧ್ಯಕ್ಷರು ಇಕೋ ಕೇರ್ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿದರು.
ತಾಲೂಕು ಪಂಚಾಯಿತ್ ನ ಸಿಬ್ಬಂದಿಗಳು ಮಹಿಳಾ ಸದಸ್ಯರಿಗೆ ಸರ್ಕಾರದ ವಿವಿಧ ಸುಸ್ಥಿರ ಜೀವನೋಪಾಯ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಇಕೋ ಕೇರ್ ಸಂಸ್ಥೆಯ ಅಧ್ಯಕ್ಷರಾದ ಸುನೀಲ ಭೋವಿ, ಒಕ್ಕೂಟದ ಅಧ್ಯಕ್ಷರು, ತಾಲೂಕು ಪಂಚಾಯತ್ ನ ಕಿರಣ್ ಭಟ್, ಜಯಮಾಲಾ, ಚೇತನಾ ಮತ್ತು ಒಕ್ಕೂಟದ ಸಿಬ್ಬಂದಿಗಳಾದ ಸವಿತಾ ನಾಯ್ಕ ಹಾಜರಿದ್ದರು.