ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಭೈರುಂಬೆ ಗೆಳೆಯರ ಬಳಗ, ಭೈರುಂಬೆ (ರಿ) ಇವರ ಆಶ್ರಯದಲ್ಲಿ ಮತ್ತು ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ಬೆಂಗಳೂರು ಇವರು ಸಂಯೋಜಿಸಿದ ರುಕ್ಮಾಂಗದ-ಮೋಹಿನಿ ಎಂಬ ತಾಳಮದ್ದಲೆ ಕಾರ್ಯಕ್ರಮವು ಜೂ.:27, ಶುಕ್ರವಾರ ಸಂಜೆ: 5:45 ರಿಂದ 9 ರ ವರೆಗೆ ಹುಳಗೋಳ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿಯಮಿತ, ಭೈರುಂಬೆ ಇಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ, ಹಿಲ್ಲೂರು ಇವರ ಭಾಗವತಿಕೆ ಇರಲಿದ್ದು ಮದ್ದಳೆ ಎ.ಪಿ. ಫಾಟಕ್ ಕಾರ್ಕಳ ಹಾಗೂ ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗ ಭಟ್ಟ, ಗೊರಮನೆ ಮಂಜುನಾಥ ಭಟ್ಟ, ಇಡಗುಂದಿ ಮಹೇಶ ಭಟ್ಟ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿರುತ್ತಾರೆ.
ಭೈರುಂಬೆಯಲ್ಲಿ ರುಕ್ಮಾಂಗದ-ಮೋಹಿನಿ ತಾಳಮದ್ದಲೆ
