ಸಿದ್ದಾಪುರ: ತಾಲೂಕಿನಲ್ಲಿ ಗಾಳಿಮಳೆಯಿಂದಾಗಿ ಪಟ್ಟಣ ಸಮೀಪದ ಮುಗದೂರಿನ ದಯಾನಂದ ಗುತ್ಯ ಚಲವಾದಿ ಇವರ ಕೊಟ್ಟಿಗೆ ಮನೆಯ ಮೇಲೆ ಹಲಸಿನ ಮರವೊಂದು ಬುಧವಾರ ರಾತ್ರಿ ಬಿದ್ದು ಮನೆ ಹಾನಿ ಉಂಟಾಗಿದ್ದು ಜಾನುವಾರುಗಳು ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿ ಅಂದಾಜು 15ಸಾವಿರ ರೂಗಳಷ್ಟು ಹಾನಿ ಉಂಟಾಗಿದೆ ಎಂದು ಪಂಚನಾಮೆ ಮಾಡಿದ್ದಾರೆ.
ತಾಲೂಕಿನಲ್ಲಿ ಆಗಾಗ ಮಳೆ ಜೋರಾಗಿ ಬೀಳುತ್ತಿದ್ದು ಇದರೊಂದಿಗೆ ಗಾಳೀಯೂ ಇರುವುದರಿಂದ ಹಲವೆಡೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದಿದೆ. ಅಲ್ಲದೆ ಕೆಲವೆಡೆ ರಸ್ತೆಯ ಮೆಲೆ ಮರಗಳು ಬಿದ್ದಿದ್ದು ಸ್ಥಳೀಯರು ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲಮಾಡಿಕೊಟ್ಟಿದ್ದಾರೆ.
ಕೊಟ್ಟಿಗೆ ಮೇಲೆ ಮರ ಬಿದ್ದು ಅಪಾರ ಹಾನಿ
