ಶಿರಸಿ: ನಗರ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಬೆಲೆ ಬಾಳುವ ಮೊಬೈಲ್ ಗಳನ್ನು ಕಳೆದುಕೊಂಡಿದ್ದ ಪಾರ್ವತಿ ಈಶ್ವರ್ ನಾಯ್ಕ್ ಗಣೇಶ್ ನಗರ ಶಿರಸಿ, ನಿಂಗನಗೌಡ ಹವಲಪ್ಪ ಗೌಡ ರಾಮನಗರ ಮಣಜವಳ್ಳಿ, ಫಾಮಿದಾ ಸೌದಾಗರ್
ಹಳೇ ಬಸ್ ಸ್ಟ್ಯಾಂಡ್ ಹತ್ತಿರ ಕೋಟೆಗಲ್ಲಿ ಶಿರಸಿ, ವಿಜಕುಮಾರ್ ಮೋದಿ ಮಾರ್ಕೆಟ್ ರೋಡ್ CMC ಕಟ್ಟಡದ ಹತ್ತಿರ ಶಿರಸಿ ಸೇರಿದಂತೆ ಒಟ್ಟು ಐದು ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದ್ದು ಪೋಲಿಸ್ ಅಧೀಕ್ಷಕ ಎಂ. ನಾರಾಯಣ್ ವಾರಸುದಾರರಿಗೆ ಹಸ್ತಾಂತರಿಸಿದರು.
ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ್ ಕೆ.ಎಲ್, ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ
ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ.ಬಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸದ್ದಾಂ ಹುಸೇನ್, ಮಲ್ಲಿಕಾರ್ಜುನ್ ಕುದರಿ,ಚನ್ನಬಸಪ್ಪ ಕ್ಯಾರಕಟ್ಟಿ, ಹನುಮಂತ ಕಬಾಡಿರವರು ಮೊಬೈಲ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದುಕೊಂಡಿದ್ದ ಮೊಬೈಲ್ ಪತ್ತೆ: ವಾರಸುದಾರರಿಗೆ ಹಸ್ತಾಂತರ
