ದಾಂಡೇಲಿ : ನಗರದ ಹಳೆ ದಾಂಡೇಲಿಯಲ್ಲಿ ಅಗೆದು ಮುಚ್ಚಲಾದ ಪೈಪ್ ಲೈನ್ ಜಾಗದಲ್ಲಿ ಸಾರಿಗೆ ಸಂಸ್ಥೆಯ ಬಸ್ಸೊಂದು ಹೂತು ಹೋಗಿ, ಬಸ್ಸಿಗೆ ಹಾನಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.
ಹಳೆ ದಾಂಡೇಲಿಯಿಂದ ಬೈಲುಪಾರಿಗೆ ಹೋಗುವ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ಕಾಮಗಾರಿ ನಡೆಸಿದ ಬಳಿಕ ಸಮರ್ಪಕವಾಗಿ ಅಗೆದ ಗುಂಡಿಯನ್ನು ಮುಚ್ಚದೆ ಇದ್ದ ಕಾರಣದಿಂದಾಗಿ ಸಾರಿಗೆ ಬಸ್ಸಿನ ಚಕ್ರ ಪೈಪ್ ಲೈನ್ ಹಾದು ಹೋದ ಸ್ಥಳದಲ್ಲಿ ಹೂತು ಹೋಗಿದೆ. ಕೊನೆಗೆ ಸ್ಥಳೀಯ ಸಾರ್ವಜನಿಕರು ಹೂತುಹೋದ ಬಸ್ಸನ್ನು ಮೇಲಕ್ಕೆ ತರಲು ಸಹಕರಿಸಿದರು.