ಶಿರಸಿ: ನಗರದ ಶಿವಾಜಿ ಚೌಕದ ಯುನಿಕ್ ಝೋನ್ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ, ತಾಲೂಕಿನಲ್ಲಿಯೇ ಪ್ರಥಮ ಕ್ಲಿನಿಕ್ ಎಂದೇ ಕರೆಯಲ್ಪಡುವ ಡಾ. ಅಕ್ಷಯ ಹೆಗಡೆಯವರ ತತ್ವ ಫಿಸಿಯೋಥೆರಪಿ ಕ್ಲಿನಿಕನ್ನು ರಿಬ್ಬನ್ ಕಟ್ ಮಾಡುವ ಮೂಲಕ ಶಿರಸಿ- ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ವೈದ್ಯಕೀಯ ಕ್ಷೇತ್ರಕ್ಕೆ ಅದರದ್ದೇ ಆದ ಮಹತ್ವ ಹೊಂದಿದ್ದು ಪ್ರತಿಯೊಂದು ವ್ಯಕ್ತಿಗಳಲ್ಲಿ ವಿವಿಧ ನಮೂನೆಯ ರೋಗಗಳು ಬರುತ್ತಿದ್ದು, ಆಸ್ಪತ್ರೆ ಅರಸಿ ಬಂದ ಗ್ರಾಹಕರನ್ನು ಸರಿಯಾದ ರೀತಿಯಲ್ಲಿ ಚಿಕಿತ್ಸೆಗೊಳಪಡಿಸಿ ಕ್ಲಿನಿಕ್‌ನ ಕೀರ್ತಿ ಕೂಡಾ ಗಳಿಸಿ ಎಂದು ಶುಭ ಹಾರೈಸಿದರು.
ನಂತರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶಿರಸಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಹಾಗೂ ವೈದ್ಯ ಡಾ. ಕೃಷ್ಣಮೂರ್ತಿ ಹೆಗಡೆ ಮಾತನಾಡಿ ವೈದ್ಯಕೀಯ ಕ್ಷೇತ್ರ ಬಹಳ ಮಹತ್ವ ಪೂರ್ಣವಾಗಿದ್ದು, ಇಲ್ಲಿ ಪ್ರಾಮಾಣೀಕ ಶ್ರದ್ಧೆ, ನಿಷ್ಠೆಗಳಿಗೆ ಹೆಚ್ಚಿನ ಲಕ್ಷ ವಹಿಸಬೇಕಿದೆ. ಜೊತೆ ಜೊತೆಗೆ ಆಯಾ ರೋಗದ ಗ್ರಾಹಕರನ್ನು ಸರಿಯಾಗಿ ಪರೀಕ್ಷಿಸಿ ರೋಗ ಗುಣಪಡಿಸುವ ಮಾರ್ಗದರ್ಶನ ಮಾಡುವುದು ಬಹಳ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಫಿಜಿಯೋಥೆರಪಿ ಕುರಿತಾದ ಕರಪತ್ರವನ್ನು ಬಿಡುಗಡೆಗೊಳಿಸಿದ ಶಿರಸಿ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞರಾದ ಡಾ. ಮಧುಕೇಶ್ವರ ಜಿ.ವಿ ಮಾತನಾಡಿ ಕೇವಲ ಶಿರಸಿ ಅಷ್ಟೇ ಅಲ್ಲದೇ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪಿಸಿಯೋಥೆರಪಿ ಕ್ಲಿನಿಕ್ ಇದು ಮೊದಲಾಗಿದ್ದು ಇಂದಿನ ಮಾನದಲ್ಲಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳದೇ ನಮ್ಮಲ್ಲಿರುವ ಅನೇಕ ರೋಗಗಳನನ್ನು ಗುಣಪಡಿಸಿಕೊಳ್ಳಬಹುದಾದ ಪಿಸಿಯೋಥೆರಪಿ ಚಿಕಿತ್ಸೆ ಬಹಳ ಮುಖ್ಯವಾದದ್ದಾಗಿದ್ದು, ಇದು ಕಾಲುನೋವು, ಕೈ, ಸಂದುನೋವು ಇರುವ ಗ್ರಾಹಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎನ್ನುತ್ತ , ಮುಂದಿನ ದಿನಗಳಲ್ಲಿ ನೂತನ ತತ್ವ ಕ್ಲಿನಿಕ್ ಪಿಸಿಯೋಥೆರಪಿ ಕ್ಲಿನಿಕ್ ಯಶಸ್ಸು ಪಡೆಯಲಿ ಎಂದರು.
ಮುಖ್ಯ ಅಭ್ಯಾಗತರಾಗಿದ್ದ ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿಯವರು ಮಾತನಾಡಿ ತತ್ವ ಪಿಸಿಯೋಥೆರಪಿ ಕ್ಲಿನಿಕ್‌ನ ಡಾ. ಅಕ್ಷಯ ಹೆಗಡೆಯವರ ಕುಟುಂಬ ನಡೆದು ಬಂದ ಹಾಗೂ ಪಿಸಿಯೋಥೆರಪಿ ಕುರಿತಾಗಿ ಅಭ್ಯಸಿಸುವಾಗ ಡಾ. ಅಕ್ಷಯ ವಹಿಸಿದ ಶ್ರಮ ಎಚ್ಚರಿಕೆ ಕುರಿತಾಗಿ ವಿವರಿಸಿದರು.
ಗಣಪತಿ ಹೆಗಡೆಯವರ ವೇದ ಘೋಷದೊಂದಿಗೆ ಕಾರ್ಯಕ್ರಮ ಆರಂಭಗೊಂಡರೆ ಡಾ. ಅಕ್ಷಯ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸುತ್ಮನೆ ವಸುಮತಿ ಹೆಗಡೆ ಕ್ಲಿನಿಕ್ ಕುರಿತಾಗಿ ಕವನ ವಾಚಿಸಿದರೆ, ವೇದಿಕೆಯಲ್ಲಿ ಡಾ. ಅಕ್ಷಯರವರ ತಂದೆ ತಾಯಿ, ಶ್ರೀಪತಿ ಹೆಗಡೆ ಮತ್ತು ಸುಶೀಲಾ ಹೆಗಡೆ ಮತ್ತಿಹಳ್ಳಿ ಹಾಗೂ ಡಾ. ಅಂಜನಾ ಹೆಗಡೆ ಮತ್ತಿಹಳ್ಳಿ ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.