ಹೊನ್ನಾವರ : ತಾಲೂಕಿನ ಹಡಿನಬಾಳ ಕಪ್ಪೆಕೆರೆಯ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾಕೇಂದ್ರದಿಂದ ಫೆ.4, ಮಂಗಳವಾರ ಸಮಯ ಸಂಜೆ 4-30 ರಿಂದ ಕಪ್ಪೆಕೆರೆಯ ಗೋಪಿ ಕಲ್ಯಾಣಮಂಟಪದಲ್ಲಿ ದಿ. ಮಹಾದೇವ ಹೆಗಡೆ ಕಪ್ಪೆಕೆರೆ ಸಂಸ್ಕರಣಾ ಕಾರ್ಯಕ್ರಮ ನಡೆಯಲಿದ್ದು ಅಂದು ನುಡಿನಮನ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಕಾರ್ಯಕ್ರಮವನ್ನು ಏರ್ಪಡಿಸಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ವಹಿಸಲಿದ್ದು ವೇದಮೂರ್ತಿ ಗೌರೀಶ ಭಟ್ಟ ಕಿಣ್ ಖರ್ವಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿ. ಮಹಾದೇವ ಹೆಗಡೆ ಕಪ್ಪೆಕರೆ ಪ್ರಶಸ್ತಿಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಇವರಿಗೆ ನೀಡಲಾಗುವುದು. ಗೋಪಾಲಕೃಷ್ಣ ಭಾಗವತ ಕಡತೋಕ, ನಾರಾಯಣ ಭಟ್ ಗುಂಡಿಬೈಲು, ಪ್ರಭಾಕರ ಹೆಗಡೆ ಚಿಟ್ಟಾಣಿ, ಜಿ.ಎನ್.ಹೆಗಡೆ ಗೋಪಿ ಇವರು ನುಡಿನಮನ ಸಲ್ಲಿಸಲಿದ್ದಾರೆ. ಅತಿಥಿಗಳಾಗಿ ಎನ್.ಜಿ.ಹೆಗಡೆ ಒಜಗಾರ್, ಪ್ರಾ| ಎಸ್. ಜಿ. ಭಟ್ ಕಬ್ಬಿನಗದ್ದೆ, ಪ್ರೊ|| ಎನ್. ಎಮ್. ಹೆಗಡೆ ಹಿಂಡನೆ, ವೆಂಕಟೇಶ ಗೌಡ ಬೇರೊಳ್ಳಿ ಅಧ್ಯಕ್ಷರು ಗ್ರಾ.ಪಂ. ಹಡಿನಬಾಳ, ಡಾ| ಪ್ರಕಾಶ ನಾಯ್ಕ ಹೊನ್ನಾವರ, ಮಾದೇವ ವಿಷ್ಣು ಹೆಗಡೆ ಕಪ್ಪೆಕೆರೆ, ಮಾರುತಿ ಪ್ರಭು ಗುಂಡಬಾಳ ಇವರು ಪಾಲ್ಗೊಳ್ಳಲಿದ್ದಾರೆ.
ಸಂಜೆ 6-30 ರಿಂದ ಬ್ರಹ್ಮ ಕಪಾಲ ಮತ್ತು ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಹಿಮ್ಮೇಳದಲ್ಲಿ ಸುಬ್ರಾಯ ಭಾಗವತ ಕಪ್ಪೆಕೆರೆ, ಸರ್ವೇಶ್ವರ ಮೂರೂರು, ಫಣೀಂದ್ರ ಹೆಗಡೆ ಕಪ್ಪೆಕೆರೆ, ಮಂಜುನಾಥ ಹೆಗಡೆ ಕಂಚಿಮನೆ, ಪಿ.ಕೆ.ಹೆಗಡೆ ಹರಿಕೇರಿ, ಗಜಾನನ ಹೆಗಡೆ ಸಾಂತೂರು, ಕು. ಮಯೂರ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಪ್ರಸಿದ್ದ ಕಲಾವಿದರಾದ ಗೋಡೆ ನಾರಾಯಣ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಶ್ರೀಮತಿ ಅಶ್ವಿನಿ ಕೊಂಡದಕುಳಿ, ಹಂಸಳ್ಳಿ ಈಶ್ವರ, ರಮಾಕಾಂತ ಮೂರೂರು, ಕಟ್ಟೆ ಈಶ್ವರ ಭಟ್ಟ, ಶ್ರೀಮತಿ ನಿರ್ಮಲಾ ಗೋಳಿಕೊಪ್ಪ, ಮಾರುತಿ ಬೈಲಗದ್ದೆ, ನಾರಾಯಣ ಹೆಗಡೆ ಕೋರೆ, ಕೇಶವ ಗೌಡ ಹಡಿನಬಾಳ, ನಾರಾಯಣ ಭಟ್ಟ ಗುಂಡಿಬೈಲ್, ದರ್ಶನ ಭಟ್ಟ ಮುಗ್ವಾ, ವೆಂಕಟೇಶ ಹೆಗಡೆ ಬುಗರಿಮಕ್ಕಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಪ್ಪೆಕೆರೆ ಕುಟುಂಬದವರು ಕಲಾಭಿಮಾನಿಗಳಲ್ಲಿ ವಿನಂತಿಸಿದ್ದಾರೆ.