Slide
Slide
Slide
previous arrow
next arrow

ಫೆ.5ರಿಂದ ಗೋಕರ್ಣ ಕಾಲಭೈರವ ದೇವರ ಅಷ್ಟಬಂಧ ಪ್ರತಿಷ್ಠೆ ಸುವರ್ಣ ಮಹೋತ್ಸವ

300x250 AD

ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಕೋಟಿತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಶ್ರೀ ಕಾಲಭೈರವ ದೇವರ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ ಫೆ.೫ ರಿಂದ ೭ ರವರೆಗೆ ವಿಜೃಂಭಣೆಯಿಂದ ಜರುಗಲಿದೆ.  ಮೂರು ದಿನಗಳ ಕಾಲ ವೇ. ನಾರಾಯಣ ಗಣಪತಿ ಉಪ್ಪುಂದ ಹಾಗೂ ವೇ।। ಮಹಾಬಲೇಶ್ವರ ಅವಧಾನಿ ನೇತೃತ್ವದಲ್ಲಿ ಧಾರ್ಮಿಕ
ಕಾರ್ಯಕ್ರಮಗಳು ನೆರವೇರಲಿವೆ.

ಫೆ.೫ರಂದು ಬುಧವಾರ ಬೆಳಿಗ್ಗೆ ಗಣಪತಿ ಪೂಜೆ, ಧ್ವಜಾರೋಹಣ, ಶುದ್ದಿ ಪುಣ್ಯಾಹ, ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಹವನ, ಪೂರ್ಣಾಹುತಿ ಜರುಗಲಿದೆ. ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ
೧ ಗಂಟೆಯಿಂದ ಅನ್ನಸಂತರ್ಪಣೆ ಇರುವುದು. ಸಂಜೆ ೪.೩೦ ಗಂಟೆಯಿಂದ ವಾಸ್ತು-ರಾಕ್ಷೋಘ್ನ ಪಾರಾಯಣ, ರಾಕ್ಷೋಘ್ನ ಹವನ, ವಾಸ್ತು ಹವನ, ಕಲಶ ಸ್ಥಾಪನೆ, ಶತರುದ್ರ ಇತ್ಯಾದಿ ಜರುಗುವುದು. ರಾತ್ರಿ ೮ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ಹಾಗೂ ನಿಗದಿತ ಮನರಂಜನಾ ಕಾರ್ಯಕ್ರಮ
ಏರ್ಪಡಿಸಲಾಗಿದೆ.

ಫೆ.೬ರಂದು ಗುರುವಾರ ಬೆಳಿಗ್ಗೆ ಮೂಲಮಂತ್ರಹವನ, ಗಂಗಾಪೂಜೆ, ಕುಂಭಾಭಿಷೇಕ ಇತ್ಯಾದಿ ಇರುವುದು. ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ. ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ನಂತರ ಮಧ್ಯಾಹ್ನ ೧ ಗಂಟೆಯಿಂದ ಅನ್ನಸಂತರ್ಪಣೆ ಇರುವುದು. ಸಂಜೆ  ೪.೩೦
ಗಂಟೆಯಿಂದ ಶಾಂತಿಪಾಠ ಇರುವುದು. ಸಂಜೆ ೫ ಗಂಟೆಗೆ ಕೋಟಿತೀರ್ಥ ವೆಂಕಟರಮಣ ದೇವಸ್ಥಾನ ಮಾರ್ಗದಿಂದ ಭದ್ರಕಾಳಿ ದೇವಸ್ಥಾನದ ತನಕ ಶ್ರೀ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರಾತ್ರಿ ೮ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ
ವಿತರಣೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ಹಾಗೂ ನಿಗದಿತ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಫೆ. ೭ರಂದು ಶುಕ್ರವಾರ ಬೆಳಿಗ್ಗೆ ವರ್ಧಂತಿ ಹವನ, ಪೂರ್ಣಾಹುತಿ ಜರುಗಲಿದೆ. ಪೂರ್ವಾಹ್ನ ೧೧ ಗಂಟೆಗೆ ಅಂಕೋಲಾದ ಮಹಿಳಾ ಸಂಘದಿಂದ ಅರಿಶಿನ ಕುಂಕುಮ ಮತ್ತು ಭಜನಾ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭ ಲಲಿತ ಸಹಸ್ರನಾಮ, ಭಗವದ್ಗೀತೆ ಪಠಣ ಇರಲಿದೆ.
ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಇರಲಿದ್ದು, ಮಧ್ಯಾಹ್ನ ೧ ಗಂಟೆಯಿಂದ ಫಲಾವಳಿಗಳ ಸವಾಲು ನಡೆಯಲಿದೆ. ಮಧ್ಯಾಹ್ನ ೨.೩೦ ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

300x250 AD

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಲ್ಲದೇ ಸಮಾಜದ ಸಾಧಕರಿಗೆ ಹಾಗೂ ತಾಲೂಕಾ ಸಂಘದ ಅಧ್ಯಕ್ಷರುಗಳಿಗೆ ಪ್ರಸಾದ ಗೌರವ ಅರ್ಪಣೆ ಇರಲಿದೆ. ಸಂಜೆ ೫ ಗಂಟೆಗೆ ಮಹಾಸಭೆ ನಡೆಯಲಿದ್ದು, ನಂತರ ಶ್ರೀ ಕಾಲಭೈರವ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಕೋಟಿತೀರ್ಥ-ನಾಗಬೀದಿ, ಮಹಾಗಣಪತಿ, ಮಹಾಬಲೇಶ್ವರ ದೇವಾಲಯ ಮಾರ್ಗದಿಂದ ಕೋಟಿತೀರ್ಥ ಪ್ರದಕ್ಷಿಣೆ ಹಾಕಿ ಅಂತ್ಯಗೊಳ್ಳಲಿದೆ. ರಾತ್ರಿ ೯ ಗಂಟೆಗೆ ಭಜನೆ, ಅಷ್ಟಾವಧಾನ ಸೇವೆ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಜರುಗಲಿದೆ. ಇದಾದ ನಂತರ ಸಭಾ ಕಾರ್ಯಕ್ರಮ ಮತ್ತು ನಿಗದಿತ
ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನುರಿತ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಏರ್ಪಡಿಸಲಾಗಿದೆ.

ಮನರಂಜನಾ ಕಾರ್ಯಕ್ರಮಗಳು : ಫೆ.೫ರಂದು ಸಂಜೆ ೫.೩೦ಕ್ಕೆ ಶ್ರೀ ಅಳವಿ ಆಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ
ಇರುವುದು. ರಾತ್ರಿ ೮ ಗಂಟೆಗೆ ಬಂಗ್ಲೆಗುಡ್ಡ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಫೆ. ೬ರಂದು ರಾತ್ರಿ ೯ ಗಂಟೆಗೆ  ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ನೃತ್ಯ ತಂಡದಿಂದ ನೃತ್ಯ ವೈಭವ ಏರ್ಪಡಿಸಲಾಗಿದೆ. ಫೆ.೭ರಂದು ರಾತ್ರಿ ೯ ಗಂಟೆಗೆ ಬಡಗೇರಿಯ
ಶ್ರೀ ಮಹಾಗಣಪತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನ ಜರುಗುವುದು.

Share This
300x250 AD
300x250 AD
300x250 AD
Back to top