Slide
Slide
Slide
previous arrow
next arrow

ಫೆ.2ಕ್ಕೆ ಅಂಕೋಲಾದಲ್ಲಿ ಲಯನ್ಸ್ ರೀಝನ್ ಸಮಾವೇಶ

300x250 AD

ಅಂಕೋಲಾ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಗತ್ತಿನಲ್ಲಿಯೇ ಅತಿದೊಡ್ಡ ಸರಕಾರೇತರ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಗತ್ತಿನಾದ್ಯಂತ 210 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 14 ಲಕ್ಷಕ್ಕೂ ಹೆಚ್ಚು ನಿಸ್ವಾರ್ಥ ಸೇವಾ ಕಾರ್ಯಕರ್ತರನ್ನು ಹೊಂದಿದೆ. ಈ ಲಾಯನ್ಸ್ ಸಂಸ್ಥೆಯ ಡಿಸ್ಟಿಕ್ಸ್ 317ಬಿ ಯ ಗಿ. ರೀಜನ್ ಸಮಾವೇಶಕ್ಕೆ ಬಾರ್ಡೋಲಿ ಖ್ಯಾತಿಯ ಅಂಕೋಲಾ ಸಾಕ್ಷಿಯಾಗುತ್ತಲಿದೆ.

ಫೆ.2 ರವಿವಾರದಂದು ಅಂಕೋಲಾ ಶೆಟಗೇರಿಯ ವಾಸುದೇವ ಕಲ್ಯಾಣ ಮಂಟಪದಲ್ಲಿ ಈ ಸಮಾವೇಶ ಜರುಗಲಿದೆ. ಈ ಸಮಾವೇಶಕ್ಕೆ ನಿವೃತ್ತ ಪ್ರಾಚಾರ್ಯ ಡಾ. ಮಹೇಶ ಅಡಕೋಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹತ್ವದ ಈ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ 16 ಲಾಯನ್ಸ್ ಕ್ಲಬ್‌ನ ಸದಸ್ಯರು ಹಾಗೂ ಪದಾಧಿಕಾರಿಗಳು ಗೋವಾ ಹಾಗೂ ಕರ್ನಾಟಕ ರಾಜ್ಯದ ಲಾಯನ್ಸ್ ಗಣ್ಯರು, ಹಾಲಿ ಹಾಗೂ ಮಾಜಿ ಪ್ರಾಂತಪಾಲರು ಭಾಗವಹಿಸುತ್ತಿದ್ದಾರೆ.

300x250 AD

ರೀಜನ್ ಮುಖ್ಯಸ್ಥ ಎಂಜೆಎಫ್ ರವಿ ನಾಯಕರ ನೇತೃತ್ವದಲ್ಲಿ ಜರುಗುವ ಈ ಸಮಾವೇಶದ ನಿರ್ವಹಣೆಯ ಜವಾಬ್ದಾರಿಯನ್ನು ಲಾಯನ್ಸ್ ಕ್ಲಬ್ ಗೋಕರ್ಣ ವಹಿಸಿಕೊಂಡಿದೆ. ಈ ಸಮಾವೇಶದಲ್ಲಿ ವಿವಿಧ ಕ್ಲಬ್‌ಗಳ ಈ ವರ್ಷದ ಸಾಧನೆ, ಪರಾಮರ್ಶೆ, ಸಾಧಕರಿಗೆ ಸನ್ಮಾನ, ಬ್ಯಾನ‌ರ್ ಪ್ರದರ್ಶನ ಮುಂತಾದ ಕಾರ್ಯಕ್ರಮ ಜರುಗಲಿದೆ ಎಂದು ಪ್ರಚಾರ ಸಮಿತಿಯ ಮುಖ್ಯಸ್ಥ ಮಹಾಂತೇಶ ರೇವಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top