ಶಿರಸಿ: ಜ.೧೯ ಭಾನುವಾರ ನಗರ ಟಿ.ಆರ್.ಸಿ ಸಭಾಭವನದಲ್ಲಿ ಆಯೋಜಿಸಲಾದ “ಲಯ ವಂದನಾ” ಶ್ರದ್ಧಾಂಜಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹೊಟೆಲ್ ಸುಪ್ರಿಯಾ ಇಂಟರ್ನ್ಯಾಶನಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಇತ್ತೀಚಿಗೆ ದಿವಂಗತರಾದ ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್ರವರ ಶ್ರದ್ಧಾಂಜಲಿ ಅಂಗವಾಗಿ ಪಂಡಿತ್ ಶ್ರೀಪಾದ್ ರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಹಾಗೂ ರಾಜದೀಪ ಟ್ರಸ್ಟ್ ಶಿರಸಿ ಸಹಯೋಗದಲ್ಲಿ ಲಯ ವಂದನಾ ಎನ್ನುವ ವಿಶೇಷ ಶ್ರದ್ಧಾಂಜಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಿರಸಿ ತಾಪಂ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಸದಾನಂದ ಭಟ್ಟ ನಿಡಗೋಡ, ಯುವ ಧುರೀಣ ದೀಪಕ ಹೆಗಡೆ ದೊಡ್ಡೂರು, ತಬಲಾ ವಾದಕ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಉದ್ಯಮಿ ನಾಗಪತಿ ಹೆಗಡೆ ಕಾಗೇರಿ, ಗಿರಿಧರ ಕಬ್ನಳ್ಳಿ, ವೆಂಕಟೇಶ ಬೆಂಗಳೆ, ಸುಧಾಕರ ಹೇಮಾದ್ರಿ ಬಿಡುಗಡೆಗೊಳಿಸಿದರು.