ದಾಂಡೇಲಿ : ಶ್ರೀರಾಮ್ ಫೈನಾನ್ಸ್ನ ನಗರದ ಕಾರ್ಯಾಲಯದಲ್ಲಿ ಶ್ರೀರಾಮ್ ಗ್ರೀನ್ ಫೈನಾನ್ಸ್ ಸಂಭ್ರಮ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಶ್ರೀರಾಮ್ ಫೈನಾನ್ಸ್ ಇದರ ನಗರದ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಸತೀಶ ಮಡಿವಾಳ ಗ್ರಾಹಕರಿಗೆ ತ್ವರಿತ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಶ್ರೀರಾಮ್ ಫೈನಾನ್ಸ್ ರಾಷ್ಟ್ರದಲ್ಲಿ ಗಮನ ಸೆಳೆದಿದೆ. ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳಿಗೆ ಹಾಗೂ ಇಂಧನರಹಿತ ವಾಹನಗಳಿಗೂ ತ್ವರಿತ ಸಾಲ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಶ್ರೀರಾಮ್ ಗ್ರೀನ್ ಫೈನಾನ್ಸ್ ಎಂಬ ಯೋಜನೆಯನ್ನು ಅನುಷ್ಠಾನಪಡಿಸಿದೆ. ಸುಸ್ಥಿರ ಉಪಕ್ರಮಗಳಿಗಾಗಿ ಕಸ್ಟಮೈಸ್ ಮಾಡಿದ ಸಾಲಗಳನ್ನು ನೀಡಲಾಗುತ್ತಿದ್ದು, ಅದು ಸ್ವಚ್ಛ, ಹೆಚ್ಚು ಪರಿಸರಸ್ನೇಹಿ ಭವಿಷ್ಯಕ್ಕೆ ಅನುವು ಮಾಡಿಕೊಡುತ್ತದೆ. ವ್ಯಕ್ತಿಗತ ಬ್ಯುಸಿನೆಸ್ ಮತ್ತು ಸಮುದಾಯಗಳಿಗೆ ಸುಸ್ಥಿರ ಗುರಿಗಳನ್ನು ವಾಸ್ತವಿಕವಾಗಿ ಪರಿವರ್ತಿಸಲು ಅಗತ್ಯವಾದ ಆರ್ಥಿಕ ಬೆಂಬಲವನ್ನು ಒದಗಿಸುವ ಮಹತ್ವಪೂರ್ಣ ಯೋಜನೆಯೆ ಶ್ರೀರಾಮ್ ಗ್ರೀನ್ ಫೈನಾನ್ಸ್ ಯೋಜನೆಯಾಗಿದೆ ಎಂದರು. ಸಾರ್ವಜನಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಇದೇ ಸಂದರ್ಭದಲ್ಲಿ ಸತೀಶ ಮಡಿವಾಳ ಕರೆ ನೀಡಿದರು.
ಶ್ರೀರಾಮ್ ಫೈನಾನ್ಸ್ ಇದರ ಕಾರ್ಯ ಚಟುವಟಿಕೆಗಳು ಹಾಗೂ ಸಾಧನೆಗಳ ಬಗ್ಗೆ ಶ್ರೀರಾಮ್ ಫೈನಾನ್ಸ್’ನ ದಾಂಡೇಲಿ ಶಾಖೆಯ ಟಿಪಿಜಿ ವ್ಯವಸ್ಥಾಪಕರಾದ ಝಿಷನ್ ಸಾಬ್ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಹಕರಾದ ನಾಗೇಶ್ ವಾಲಿಕರ್, ಅಕ್ಬರ್ ತಹಶೀಲ್ದಾರ್, ಶ್ರೀರಾಮ್ ಮೋಟರ್ಸ್ ಇದರ ಶ್ರೀರಾಮ್ ಪೈ, ಹೀರೋ ಶೋರೂಮಿನ ರಾಜಕಿರಣ್ ಕಲಶೆಟ್ಟಿ, ಸುಜುಕಿ ಶೋರೂಮಿನ ಗುರ್ಮಿತ್ ಸಿಂಗ್ ಸೇರಿದಂತೆ ಗ್ರಾಹಕರು ಹಾಗೂ ಶ್ರೀರಾಮ್ ಫೈನಾನ್ಸಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.