Slide
Slide
Slide
previous arrow
next arrow

ಜ.14ರಿಂದ ಅಳ್ವೇಕೋಡಿ ಮಾರಿಜಾತ್ರೆ ಪ್ರಾರಂಭ: ವಿವಿಧ ಧಾರ್ಮಿಕ ಕಾರ್ಯಕ್ರಮ

300x250 AD

ಭಟ್ಕಳ : ಜನವರಿ 14 ಮತ್ತು 15 ರಂದು ಪುರಾಣ ಪ್ರಸಿದ್ಧ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದದಿಂದ ಮಾರಿ ಜಾತ್ರಾ ಮಹೋತ್ಸವ ನಡೆಸಲು ದೇವಾಲಯ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಮಾರಿ ಜಾತ್ರೆ ಸಮಿತಿ ಅಧ್ಯಕ್ಷರಾದ ರಾಮಾ ಮೊಗೇರ ರಾಮ ಮೊಗೇರ ತಿಳಿಸಿದ್ದಾರೆ. ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಸಮಿತಿಯಿಂದ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಅಮ್ಮನ ಅಭಯ ಪ್ರಸಾದದಿಂದ ಶ್ರೀ ದುರ್ಗಾಪರಮೇಶ್ವರಿ ಮಾರಿಜಾತ್ರಾ ಮಹೋತ್ಸವ ಸಮಿತಿ ರಚಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಮಾರಿ ಜಾತ್ರೆಯು ಇವರೆಗೆ ಐದು ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಈ ಬಾರೀ ನಡೆಯುವ ಜಾತ್ರೆ ಆರನೆಯದ್ದಾಗಿದೆ.

ಈ ಬಾರಿಯೂ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಭಕ್ತಾಧಿಗಳ ಸಹಕಾರದಿಂದ ನಡೆಸಿಕೊಂಡು ಅತಿ ವಿಜೃಂಭಣೆಯಿಂದ ಜಾತ್ರೆ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಮಾಹಿತಿ ನೀಡಿದರು.

ಜ:13 ರಂದು ಸೋಮವಾರ ಸಂಜೆ 3 ಸೇರಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಪ್ರಾರ್ಥಿಸಿಕೊಂಡು ಘಂಟೆಗೆ ಎಲ್ಲಾ ಭಕ್ತಾದಿಗಳು ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊರಡುವಾಗ ಕಾಯಿ, ಹೂ, ಹಣ್ಣು, ಬಳೆ, ಸೀರೆ, ಅರಿಸಿನ, ಕುಂಕುಮ ಇತ್ಯಾದಿ ಸುವಾಸಿನಿ ದ್ರವ್ಯಗಳನ್ನು ತೆಗೆದುಕೊಂಡು ಹೊರಡುವುದು, ಸಂಜೆ 3.45ಕ್ಕೆ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಕೊಟ್ಟು ಅಲ್ಲಿಂದ ಪ್ರಸಾದವನ್ನು ತೆಗೆದುಕೊಂಡು ಬೈಕ್‌ ರ‌್ಯಾಲಿಯಲ್ಲಿ ಶಿರಾಲಿ, ಸಾರದೊಳೆ, ಮಾವಿನಕಟ್ಟೆ, ಯಕ್ಷಿಮನೆ, ಸಣಬಾವಿ, ಶ್ರೀರಾಮ ಭಜನಾ ಮಂದಿರಕ್ಕೆ ಬಂದು ಅಲ್ಲಿಂದ ವಾದ್ಯಾದಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರೆ ಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ಬರುವುದು. ಹೊರೆ ಕಾಣಿಕೆ ಸ್ವೀಕಾರ ನಂತರ ಮಾರಿಕಾಂಬಾ ಮೂರ್ತಿ ಮತ್ತು ಮಾತಂಗಿ ಮೂರ್ತಿಯನ್ನು ಸಾಯಂಕಾಲ 7 ಘಂಟೆಗೆ ಗದ್ದುಗೆಗೆ ಕರೆದೊಯ್ಯುವುದು. ಶ್ರೀ ದೇವಿಯಲ್ಲಿ ದೀಪ ಸ್ಥಾಪನೆ, ಮಹಾಪ್ರಾರ್ಥನೆ ಫಲ ಸಮರ್ಪಣೆ, ಅಡುಗೆ ಛತ್ರದಲ್ಲಿ ಒಲೆಗೆ ಅಗ್ನಿ ಪ್ರತಿಷ್ಠಾಪನೆ ಹಾಗೂ ಮಾರಿಕಾಂಬಾ ಪ್ರತಿಷ್ಠಾಪನಾ ಸ್ಥಾನದಲ್ಲಿ ಗಣಪತಿ ಪೂಜನಾ, ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕ್ಷೋಘ್ನ ಹವನ, ದೀಕ್ಷಾಲಬಲಿ, ಹೊಸ ಆಭರಣಗಳ ಸಮರ್ಪಣೆ ಇರುತ್ತದೆ. 

ಜ.14, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜ್ಯನಾ, ಪುಣ್ಯಾಹವಾಚನ, ನಾಂದಿ ಸಮಾರಾಧನೆ. ಪೂರ್ವಾಹ್ನ 8-00ಕ್ಕೆ ಪೂರ್ಣಕಲಶದೊಂದಿಗೆ ಮಾರಿಕಾಂಬೆಗೆ ಪ್ರಾಣ ಪ್ರತಿಷ್ಠಾಪನೆ, ಮಂಗಳಾಷ್ಟಕ, ವೇದಘೋಷ, ವಾದ್ಯಗಳೊಂದಿಗೆ ಮಹಾಮಂಗಳಾರತಿ ನಂತರ ಆಡಳಿತ ಕಮಿಟಿ, ಮಾರಿಜಾತ್ರಾ ಕಮಿಟಿಯವರಿಗೆ ಮಾರಿಕಾಂಬ ದೇವಿಯ ಪ್ರಸಾದ ವಿತರಣೆ ನಂತರ ಭಕ್ತಾದಿಗಳ ಸೇವೆ ಪ್ರಾರಂಭ. 11-30 ಕ್ಕೆ ಮಾರಿಕಾಂಬಾ ದೇವಿಯ ಸಾನಿದ್ಯದಲ್ಲಿ ನೈವೇದ್ಯ ಮತ್ತು ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ಪ್ರಾರಂಭ. ಸಂಜೆ 4.30 ಕ್ಕೆ ಭಜನಾ ಕಾರ್ಯಕ್ರಮ. ರಾತ್ರಿ 9 ಗಂಟೆಗೆ ಪ್ರಸಿದ್ಧ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಸಂಪೂರ್ಣ ದೇವಿ ಮಹಾತ್ಮ ಯಕ್ಷಗಾನ ಇರುತ್ತದೆ.

300x250 AD

ಜ.15, ಬುಧವಾರ ಬೆಳಿಗ್ಗೆ 7.00 ರಿಂದ ಸುಪ್ರಭಾತ ಪೂಜೆ, ಭಕ್ತಾದಿಗಳಿಂದ ಸೇವೆ ಪ್ರಾರಂಭ, 11.30ಕ್ಕೆ ಮಾರಿಕಾಂಬಾ ದೇವಿಯಲ್ಲಿ ನೈವೇದ್ಯ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಂತರ ಸಂಜೆ 5 ಗಂಟೆಗೆ ಶ್ರೀ ಮಾರಿಕಾಂಬಾ ಮೂರ್ತಿ ಮತ್ತು ಶ್ರೀ ಮಾತಾಂಗಿ ಮೂರ್ತಿಯು ಚಂಡೆ, ಗೊಂಬೆ ಕುಣಿತ, ವಿವಿಧ ಸ್ತಬ್ಧ ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ಪ್ರಾರಂಭ, ದಾರಿಯ ಮಧ್ಯ 1)ಗಡಿವೀರ ಸ್ಥಳ 2) ಮಠದ ಜಟ್ಟ ಸ್ಥಳ 3) ತಣ್ಣಿರು ಕಟ್ಟೆ 4)ದೇವಿ ಅಮ್ಮನಮನೆ ಕುಶ್ಚಾಂಡ, ದೊಂದಿ, ಕುಂಕುಮ ಇತ್ಯಾದಿ ನಡೆಯಲಿದೆ. ಸಾಯಂಕಾಲ 9 ಗಂಟೆಗೆ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿ ಮೂರ್ತಿ ಮತ್ತು ಮಾತಾಂಗಿ ಮೂರ್ತಿಗಳಿಗೆ ದೃಷ್ಟಿ, ದೀಪಾಗ್ನಿ ನಂತರ ಪೂಜೆ ಪ್ರಸಾದ ಸ್ವೀಕಾರ, ಮಾತಾಂಗಿ ಮೂರ್ತಿಗೆ ಸಮಸ್ತ ಭಜಕರಿಂದ ಬಲಿ ಪೂಜೆ, ಇಡಗಾಯಿ ಒಡೆಯುವುದು. ಮಾತಂಗಿ ಮೂರ್ತಿಯನ್ನು ವೆಂಕಟಾಪುರ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಜ.16, ಗುರುವಾರ ಪ್ರಧಾನ ಮಾರಿಕಾಂಬಾ ಮೂರ್ತಿಗೆ ಕಲಾಸಂಕೋಚ ಹವನ ಮಾಡಿ ವಿಸರ್ಜಿಸುವುದು ಮತ್ತು ಶ್ರೀ ದೇವಿಯ ದ್ವಾದಶಿ ಕಲಶ ಸಂಪ್ರೋಕ್ಷಣೆ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ತಿಮ್ಮಪ್ಪ ಹೊನ್ನಿಮನೆ, ನಾರಾಯಣ್ ದೈಮನೆ, ಬಿಳಿಯ ನಾಯ್ಕ ಹನುಮಂತ ನಾಯ್ಕ ದೇವಪ್ಪ ಮೊಗೇರ, ಬಾಬು ಅಳಿಕೂಸನ್ಮನೆ, ವಿಠಲ ದೈಮನೆ, ಯಾದವ್ ಮೊಗೇರ ಇನ್ನಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top