ಶಿರಸಿ: ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ತಾಲೂಕಿನ ಜಡ್ಡಿಗದ್ದೆ ಪ್ರೌಢಶಾಲೆಯಲ್ಲಿ ನ.21,ಗುರುವಾರದಂದು ‘ವ್ಯಕ್ತಿತ್ವ ವಿಕಸನ’, ‘ಯೋಗ ಪ್ರಾಣ ವಿದ್ಯೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
‘ವ್ಯಕ್ತಿತ್ವ ವಿಕಸನ’ ಕುರಿತು ಉಪನ್ಯಾಸವನ್ನು ಲಯನ್. ವಿ.ಎಂ ಭಟ್ ನಡೆಸಿಕೊಟ್ಟಿದ್ದು, ಲಯನ್ ಜ್ಯೋತಿ ಅಶ್ವತ್ಥ್ ‘ಯೋಗ ಪ್ರಾಣ ವಿದ್ಯೆ’ ತರಬೇತಿಯನ್ನು ನೀಡಿದರು.
ಲಯನ್ಸ್ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.