ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ವೀರಮಾರುತಿ ಕದಂಬೇಶ್ವರ ಮಂಡಳಿಯ ಕಲಾವಿದರಿಂದ ಬಂಕನಾಳದ ಲಕ್ಷ್ಮಿನಾರಾಯಣ ದೇವಾಲಯದ ತೃತೀಯ ವಾರ್ಷಿಕ ಸಮಾರಾಧನೆಯ ಪ್ರಯುಕ್ತ ಏರ್ಪಡಿಸಲಾದ ಯಕ್ಷಗಾನ ಆಖ್ಯಾನ “ಸುದರ್ಶನ ವಿಜಯ” ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮವನ್ನು ರಂಜಿಸಿತು.
ನಾಟ್ಯಾಚಾರ್ಯ ಶಂಕರಭಟ್ (ಸುದರ್ಶನ), ಸದಾನಂದ ಪಟಗಾರ (ಲಕ್ಷ್ಮಿ), ವಿನಾಯಕ ಮಾವಿನಕಟ್ಟಾ(ವಿಷ್ಣು), ಲಕ್ಷ್ಮಿನಾರಾಯಣ ಹೆಗಡೆ ಶಿರಗುಣಿ (ಶತ್ರುಪ್ರಸೂದನ), ಮಹಾಬಲೇಶ್ವರ ತೆಪ್ಪಗಿ(ದೇವೇಂದ್ರ), ವೆಂಕಟ್ರಮಣ ಹೆಗಡೆ ಮಾದನಕಳ್(ದೂತ) ತಮ್ಮ ತಮ್ಮ ಪಾತ್ರಗಳಲ್ಲಿ ಕಲಾತ್ಮಕತೆ ಮೆರೆದರು. ನಂತರ ಪ್ರದರ್ಶಿಸಲ್ಪಟ್ಟ ಆಖ್ಯಾನ “ಬೇಡರ ಕಣ್ಣಪ್ಪ” ಹಾಸ್ಯಮಯವಾಗಿ ಆಕರ್ಷಿಸಿತು. ರಘುಪತಿ ನಾಯ್ಕ ಹೆಗ್ಗರಣಿ (ಕೈಲಾಸ ಶಾಸ್ತ್ರಿ), ಮಹಾವೀರ ಜೈನ (ರಾಣಿ), ವೆಂಕಟ್ರಮಣ ಹೆಗಡೆ ಮಾದನಕಳ್( ಕಾಶಿ ಮಾಣಿ), ಲಕ್ಷ್ಮಿನಾರಾಯಣ ಹೆಗಡೆ (ಗೌಡ), ಮಹಾದೇವ ಭಟ್ ತೆಪ್ಪಗಿ( ಬೇಡರ ದಿಣ್ಣ), ಭಾವನಾ ನಾಯ್ಕ ಎಚಡಿ (ದಿಣ್ಣನ ಪತ್ನಿ) ಇವರೆಲ್ಲ ಉತ್ತಮವಾಗಿ ಅಭಿವ್ಯಕ್ತಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ ಗಾಣಿಗದ್ದೆ ಹಾಗೂ ದಿನೇಶ ಭಟ್ ಅಣಲಗಾರ್ ಮದ್ದಲೆಯಲ್ಲಿ ವಿಠಲ ಪೂಜಾರಿ ಚೆಂಡೆವಾದನದಲ್ಲಿ ಗಂಗಾಧರ ಹೆಗಡೆ ಪೂರಕ ಸಾತ್ ನೀಡಿದರು. ದೇವಾಲಯದ ಮುಖ್ಯಸ್ಥರಾದ ಎಂ. ಸಿ. ನಾಯ್ಕರು ಕಲಾವಿದರನ್ನ ಗೌರವಿಸಿದರು.