Slide
Slide
Slide
previous arrow
next arrow

ರೈತನ ಸಹಕಾರದಿಂದ ಸಂಘ ಸದೃಢವಾಗಿ ಬೆಳೆದಿದೆ: ಎಂ.ಜಿ.ನಾಯ್ಕ್

300x250 AD

ಕ್ಯಾದಗಿ ವಿಎಸ್ಎಸ್ ವಾರ್ಷಿಕ ಸರ್ವಸಾಧಾರಣ ಸಭೆ: 18.11ಲಕ್ಷ ರೂ. ಲಾಭ

ಸಿದ್ದಾಪುರ: ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘ ಅನೇಕ ರೈತರ ಜೀವನಾಡಿಯಾಗಿ ಎಲ್ಲರ ಸಹಕಾರದಿಂದ ಇಂದು ಸದೃಢವಾಗಿ ಬೆಳೆದು ನಿಂತಿದೆ ಎಂದು ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಹೇಳಿದರು.

ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ 48ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.

ಸಂಘವು ಸದಸ್ಯರ ಪ್ರಾಮಾಣಿಕ ವ್ಯವಹಾರದಿಂದ 18ಲಕ್ಷ 11ಸಾವಿರ ರೂ.ಗಳಷ್ಟು ಲಾಭವನ್ನು ಗಳಿಸಿದ್ದು, ಆಡಿಟ್ ವರ್ಗೀಕರಣದಲ್ಲಿ ಕಳೆದ ಸಾಲಿನಂತೆ ‘ಅ’ ಶ್ರೇಣಿಯಲ್ಲಿ ಮುಂದುವರೆದಿದೆ.ಈ ವರ್ಷ ಸದಸ್ಯರಿಗೆ ಶೇ.4 ರಷ್ಟು ಡಿವಿಡೆಂಡ್ ನೀಡುವುದಾಗಿ ಹೇಳಿದರು.

300x250 AD

2023-24ನೇ ಸಾಲಿನ ಅಂತ್ಯಕ್ಕೆ 2,17,99,187ರೂ ನಿಧಿಗಳನ್ನು ಹಾಗೂ 7,29,67,113ರೂ. ಠೇವು ಹೊಂದಿದೆ. ಸದಸ್ಯರಿಗೆ ಅವರ ಅನುಕೂಲಕ್ಕೆ ತಕ್ಕಂತೆ 19,30,79,896ರೂ.ವಿವಿಧ ಸಾಲಗಳನ್ನು ನೀಡಿದ್ದು 24,74,10,897ರೂ. ದುಡಿಯುವ ಬಂಡವಾಳ ಹೊಂದಿದೆ. ರೈತರು ತಮ್ಮ ಮಹಸೂಲುಗಳನ್ನು ಸಂಘದ ಮುಖಾಂತರವೇ ವಿಕ್ರಯಿಸಿ, ಕಡ್ಡಾಯ ಠೇವಿನ ಪ್ರಯೋಜನ ಪಡೆದುಕೊಳ್ಳಬೇಕು. ಸಂಘದ ಸದಸ್ಯರ ಅನುಕೂಲಕ್ಕಾಗಿ ಸೂಪರ್ ಮಾರ್ಕೆಟ್ ಸೇವೆ ಆರಂಭಿಸಲಾಗಿದ್ದು ಸದಸ್ಯರು ಇದರ ಪ್ರಯೋಜನ ಪಡದುಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ಸಂಘದ 21ಜನ ಹಿರಿಯ ಸದಸ್ಯರನ್ನು ಹಾಗೂ ಸಂಘದಲ್ಲಿ ಹೆಚ್ಚು ಕಿರಾಣಿ ಖರೀದಿ ಮಾಡಿದ 3ಜನರಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರೋತ್ಸಾಹ ಬಹುಮಾನ ನೀಡಿಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಪರಮೇಶ್ವರ ನಾಯ್ಕ, ಗಣಪತಿ ನಾಯ್ಕ, ಲಕ್ಷ್ಮಣ ನಾಯ್ಕ, ಸುಬ್ರಾಯ ಹೆಗಡೆ, ರವಿ ನಾಯ್ಕ, ಭಾರತಿ ಭಟ್ಟ, ವಿಜಯಾ ನಾಯ್ಕ, ಗೌರ್ಯ ನಾಯ್ಕ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಗೌಡ ವಾರ್ಷಿಕ ವರದಿ ವಾಚಿಸಿದರು.
.ಉಪಾಧ್ಯಕ್ಷ ಗಣೇಶ ನಾರಾಯಣ ಭಟ್ಟ ಸ್ವಾಗತಿಸಿದರು.ಆಡಳಿತ ಮಂಡಳಿ ಸದಸ್ಯ ಕೆ.ಪಿ. ರಘುಪತಿ ಕ್ಯಾದಗಿ ವಂದಿಸಿದರು. ನಾಮ ನಿರ್ದೇಶಿತ ಸದಸ್ಯ ಆರ್. ಜಿ. ಹೆಗಡೆ ಬಿಳಲಗೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top