ಸಿದ್ದಾಪುರ: ಕಳೆದ 25 ವರ್ಷಗಳಿಂದ ಒಡ್ಡೋಲಗ ಸಂಸ್ಥೆಯು ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಈ ವರ್ಷ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. 1998ರಲ್ಲಿ ತಾಳಮದ್ದಳೆ ಕಾರ್ಯಕ್ರಮಗಳ ಮೂಲಕ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವನ್ನು ಆರಂಭಿಸಿದ್ದು ಈ ವರ್ಷವೂ ಆ.29ರಿಂದ 31ರವರೆಗೆ ಪ್ರತಿದಿನ ಸಂಜೆ 5.30ರಿಂದ ಕವ್ಲಕೊಪ್ಪದ ಶ್ರೀ ಸಿದ್ದಿವಿನಾಯಕ ದೇವಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಒಡ್ಡೋಲಗದ ಮುಖ್ಯಸ್ಥ,ಪ್ರಸಿದ್ಧ ರಂಗ ನಿರ್ದೇಶಕ,ಕಲಾವಿದ ಗಣಪತಿ ಹೆಗಡೆ ಹಿತ್ಲಕೈ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಆ.29ರ ಸಂಜೆ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉದ್ಘಾಟಿಸಲಿದ್ದು ದೇವಾಲಯದ ಅಧ್ಯಕ್ಷ ಎಂ.ಎಸ್.ಹೆಗಡೆ ಕವ್ಲಕೊಪ್ಪ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಲೇಖಕ ಡಿ.ಜಿ.ಹೆಗಡೆ ಕೆರೆಹೊಂಡ, ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ, ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್ ಪಾಲ್ಗೊಳ್ಳುವರು. ನಂತರ ರಾಮಾಂಜನೇಯ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ,ಶಂಕರ ಭಾಗವತ, ಮುಮ್ಮೇಳದಲ್ಲಿ ಜಬ್ಬಾರ ಸುಮೋ ಸಂಪಾಜೆ,ಪವನ ಕಿರಣಕೆರೆ,ಡಿ.ಜಿ.ಹೆಗಡೆ ಕೆರೆಹೊಂಡ, ಡಾ|ಮಹೇಶ ಭಟ್ ಉಮ್ಮಚಗಿ,ವಿನಾಯಕ ಹೆಗಡೆ ಕವ್ಲಕೊಪ್ಪ ಪಾಲ್ಗೊಳ್ಳುವರು. ಆ.30ರ ಸಂಜೆ ಒಡ್ಡೋಲಗ ರಂಗಪರ್ಯಟನದ ಹೊಸ ನಾಟಕ ಹೆನ್ರಿಕ್ ಇಬ್ಸನ್ನ ಮೂಲಕೃತಿಯ ಸುರೇಂದ್ರನಾಥ್ ಬೆಂಗಳುರು ರೂಪಾಂತರ,ನಿರ್ದೇಶನ, ಸೌಮ್ಯಾ ಭಾಗ್ವತ ಸಹನಿರ್ದೇಶನದ ‘ಜನಶತ್ರು’ ನಾಟಕ ಪ್ರದರ್ಶನಗೊಳ್ಳಲಿದ್ದು ಗಣಪತಿ ಬಿ.ಹಿತ್ಲಕೈ, ನಾಗರಾಜ್ ಬರೂರು, ಪ್ರಜ್ಞಾ ಜಿ.ಹಿತ್ಲಕೈ, ನವೀನ್ ಕುಮಾರ ಕುಣಜಿ. ಧೀರಜ್ ವಾಸುದೇವ ಪಾತ್ರ ನಿರ್ವಹಿಸುವರು. ನಂತರ ಶಾಸ್ತ್ರೀಯ ಸಂಗೀತ ಜುಗಲಬಂದಿ ಕಾರ್ಯಕ್ರಮದಲ್ಲಿ ಗಾಯನದಲ್ಲಿ ವಿನಾಯಕ ಹೆಗಡೆ ಹಿರೇಹದ್ದ, ಮೇಧಾ ಭಟ್ಟ ಅಗ್ಗೆರೆ, ವಾಣಿ ಹೆಗಡೆ ಗೊಂಟನಾಳ, ಬಾನ್ಸುರಿಯಲ್ಲಿ ನಾಗರಾಜ್ ಹೆಗಡೆ ಶಿರನಾಲೆ, ಹಾರ್ಮೋನಿಯಂ ನಲ್ಲಿ ಅಜಯ ಹೆಗಡೆ ವರ್ಗಾಸರ, ತಬಲಾದಲ್ಲಿ ಗಣೇಶ ಭಾಗ್ವತ ಗುಂಟಕಲ್, ಅನೀಶ ಹೆಗಡೆ ಹಿರೇಹದ್ದ ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ|ಶಶಿಭೂಷಣ ಹೆಗಡೆ ದೊಡ್ಮನೆ ಚಾಲನೆ ನೀಡಲಿದ್ದು ಪತ್ರಕರ್ತ,ಬರೆಹಗಾರ ಗಂಗಾಧರ ಕೊಳಗಿ ನಾಟಕ ನುಡಿಗಳನ್ನಾಡುವರು. ಭಾಸ್ಕರ ಹೆಗಡೆ ಮುತ್ತಿಗೆ ಪರಿಚಯ ಹಾಗೂ ನಿರೂಪಿಸುವರು. ಆ.31ರಂದು ಉಡುಪಿ ಶಾಸ್ತ್ರೀಯ ಯಕ್ಷಮೇಳದಿಂದ ಋತುಪರ್ಣ ಯಕ್ಷಗಾನ ಪ್ರದರ್ಶನಗೊಳ್ಳಿದ್ದು ಹಿಮ್ಮೇಳದಲ್ಲಿ ಶಶಿಕಿರಣ ಮಣಿಪಾಲ್, ಕೂಡ್ಲಿ ದೇವದಾಸ ಕಾಮತ್, ಪಾಡಿಗಾರು ಲಕ್ಷ್ಮಿನಾರಾಯಣ ಉಪಾಧ್ಯ,ಮುಮ್ಮೇಳದಲ್ಲಿ ಗುರುರಾಜ ಮಾರ್ಪಳ್ಳಿ, ಪ್ರತೀಶಕುಮಾರ ಬ್ರಹ್ಮಾವರ, ಶ್ರೀನಿವಾಸ ಐತಾಳ ಪಾದೂರು ಪಾಲ್ಗೊಳ್ಳುವರು. ನಂತರ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಹಿರಿಯ ಸಾಮಾಜಿಕ ಕಾರ್ಯಕರ್ತ ಎನ್.ವಿ.ಹೆಗಡೆ ಮುತ್ತಿಗೆ ವಹಿಸಲಿದ್ದು ಕಲಾವಿದ ವಿನಾಯಕ ಹೆಗಡೆ ಕವ್ಲಕೊಪ್ಪ, ಪತ್ರಕರ್ತ ನಾಗರಾಜ್ ಮತ್ತಿಗಾರ, ವಿ.ಎಸ್.ಎಸ್.ಸದಸ್ಯ ಅನಂತ ಹೆಗಡೆ ಗೊಂಟನಾಳ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ,ಪ್ರಾಂಶುಪಾಲ ಎಂ.ಕೆ.ನಾಯ್ಕ ಹೊಸಳ್ಳಿ ಒಡನಾಡಿಗಳ ನುಡಿಗಳನ್ನಾಡಲಿದ್ದು ಉಪನ್ಯಾಸಕ ದತ್ತಮೂರ್ತಿ ಭಟ್ ಶಿವಮೊಗ್ಗ ಸಮಾರೋಪ ನುಡಿಗಳನ್ನಾಡುವರು. ಈ ಎಲ್ಲ ಕಾರ್ಯಕ್ರಮಗಳಿಗೆ ಪಿ.ಪಿ.ಹೆಗಡೆ ಶಿರಸಿ ಧ್ವನಿ ಮತ್ತು ಬೆಳಕು ಒದಗಿಸಲಿದ್ದು ಗಣಪತಿ ಹೆಗಡೆ ವಡ್ಡಿನಗದ್ದೆ, ಶ್ರೀಧರ ಭಾಗ್ವತ ಹೊನ್ನೆಸರ, ಮುರುಗೇಶ ಬಸ್ತಿಕೊಪ್ಪ ತಾಂತ್ರಿಕ ನೆರವು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲ ಆಸಕ್ತರು ಪಾಲ್ಗೊಳ್ಳಬೇಕೆಂದು ಗಣಪತಿ ಹೆಗಡೆ ಕೋರಿದರು. ಧೀರಜ್ ವಾಸುದೇವ, ಮುರುಗೇಶ ಬಸ್ತಿಕೊಪ್ಪ ಇದ್ದರು.